ವಲಸಿಗರು ನಮ್ಮ ಪಕ್ಷದವರು, ಆದರೆ ಎಲ್ಲರಿಗೂ ಸಚಿವ ಸ್ಥಾನ ಸಿಗುತ್ತೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಾಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ರಾಜಭವನದಲ್ಲಿ ನೂತನ ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರಮಾಣವಚನ ಸ್ವೀಕರಿಸಿದ ಬಳಿಕ ಮಾತನಾಡಿದ ನಳೀನ್ ಕುಮಾರ್ ಕಟೀಲ್ ಯಾರು ಮಂತ್ರಿಯಾಗಬೇಕು ಎನ್ನುವುದು ಸಿಎಂ ನಿರ್ಧಾರ ಎಂದಿದ್ದಾರೆ.
ಇನ್ನೂ ಸಿಟಿ ರವಿ ಮಾತನಾಡಿ, ” ವಲಸಿಗರು ಎಂದು ನಾವು ಹೇಳಲು ಆಗುವುದಿಲ್ಲ. ಒಂದು ಬಾರಿ ನಮ್ಮ ಪಕ್ಷ ಸೇರಿದರೆ ಅವರು ನಮ್ಮ ಪಕ್ಷದವರೇ. ಅವರನ್ನು ಪ್ರತ್ಯೇಕವಾಗಿ ನೋಡಲು ಸಾಧ್ಯವಿಲ್ಲ. ಯಾರು ಕೆಲಸ ಮಾಡುತ್ತಾರೋ ಅವರು ಹೆದರಬೇಕಾಗಿಲ್ಲ. ಯಾರು ಕೆಲಸ ಮಾಡುವುದಿಲ್ಲವೋ ಅವರ ಬಗ್ಗೆ ಪಕ್ಷ ಯೋಚಿಸುತ್ತದೆ” ಎಂದಿದ್ದಾರೆ.
ಹೊಸಬರಿಗೆ ಮಣೆ ಹಾಕಲಾಗತ್ತಾ ಎನ್ನುವ ಕುತೂಹಲ ಹೆಚ್ಚಿದೆ.
PublicNext
28/07/2021 01:50 pm