ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮತಬೇಟೆಗಾಗಿ ರಾಗಾ ಅವಸ್ಥೆ : ವಿಡಿಯೋ ವೈರಲ್

ತಮಿಳುನಾಡು : ತಮಿಳುನಾಡು ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸ್ಥಳೀಯರೊಂದಿಗೆ ಮತದಾನ ಭಾಷಣಗಳ ಜೊತೆ ದೈಹಿಕ ಸಾಮರ್ಥ್ಯದ ಪ್ರದರ್ಶನದೊಂದಿಗೆ ಜನರ ಗಮನ ಸೆಳೆಯುತ್ತಿದ್ದಾರೇನು ಎನಿಸುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ವೀಡಿಯೊವೊಂದರಲ್ಲಿ, 50 ವರ್ಷದ ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿದ್ಯಾರ್ಥಿಯೊಬ್ಬನೊಂದಿಗೆ ಪುಷ್-ಅಪ್ ಮಾಡುತ್ತಿರುವುದು ಈಗ ಬಾರಿ ಸುದ್ದಿ ಮಾಡುತ್ತಿದೆ.

ಸುಮಾರು ಒಂದು ನಿಮಿಷದ ಕ್ಲಿಪ್ ನಲ್ಲಿ ವಯನಾಡ್ ನ ಕೇರಳ ಸಂಸದ ವಿದ್ಯಾರ್ಥಿಯೊಂದಿಗೆ ಮಾತನಾಡುವಾಗ 'ಪುಷ್-ಅಪ್ ಚಾಲೆಂಜ್' ತೆಗೆದುಕೊಳ್ಳುವುದನ್ನು ತೋರಿಸುತ್ತದೆ. 'ನೀವು ಪುಷ್-ಅಪ್ ಮಾಡಬಹುದೇ ? 15 ಪ್ರಯತ್ನಿಸೋಣ ?' ಗಾಂಧಿಯನ್ನು 10 ನೇ ತರಗತಿ ವಿದ್ಯಾರ್ಥಿ ಮೆರೋಲಿನ್ ಶೆನಿಘಾ ಕೇಳುವುದು ವಿಡಿಯೋದಲ್ಲಿ ಕಂಡು ಬಂದಿದೆ. ರಾಹುಲ್ ಗಾಂಧಿ ಕೂಡ ಈ ವಿಡಿಯೋ ಕ್ಲಿಪ್ ನ್ನು ತಮ್ಮ ವೈಯಕ್ತಿಕ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Edited By : Nirmala Aralikatti
PublicNext

PublicNext

01/03/2021 05:48 pm

Cinque Terre

86.67 K

Cinque Terre

5

ಸಂಬಂಧಿತ ಸುದ್ದಿ