ದಾವಣಗೆರೆ: ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ದಂಪತಿಗೆ ಹಾಲಿನ ಅಭಿಷೇಕ ಮಾಡಲಾಯಿತು.
ರೇಣುಕಾಚಾರ್ಯರ 59ನೇ ಹುಟ್ಟು ಹಬ್ಬ ಹಿನ್ನೆಲೆಯಲ್ಲಿ ಹೊನ್ನಾಳಿ ಪಟ್ಟಣದ ಸಂತೆ ಮೈದಾನದಲ್ಲಿ ಹಾಲಿನ ಅಭಿಷೇಕ ನೆರವೇರಿಸಲಾಯಿತು. ಎರಡು ಬಿಂದಿಗೆ ಹಾಲು ಸುರಿದು ಅಭಿಮಾನಿಗಳ ಸಂಭ್ರಮ ಪಟ್ಟರು. ಹಾಲಿನ ಅಭಿಷೇಕದ ನಂತರ ಕೇಕ್ ಕತ್ತರಿಸಿ ಬರ್ತ್ ಡೇ ಅನ್ನು ಆಚರಿಸಿದರು.
ಸುಂಕದಕಟ್ಟೆ ಗ್ರಾಮದ ಪ್ರಸಿದ್ಧ ಶ್ರೀ ಮಂಜುನಾಥ ಸ್ವಾಮಿ, ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಪೂಜಾ ಕಾರ್ಯಕ್ರಮಗಳಲ್ಲಿ ದಂಪತಿ ಸಮೇತರಾಗಿ ಪಾಲ್ಗೊಂಡರು.
PublicNext
01/03/2021 05:17 pm