ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರಧಾನಿ ಬಹುತ್ವ ಸಂಸ್ಕೃತಿಯನ್ನು ಗೌರವಿಸಬೇಕು: ರಾಹುಲ್ ಸಲಹೆ

ತಮಿಳುನಾಡು: ಭಾರತಕ್ಕೆ ಒಂದು ಸಂಸ್ಕೃತಿ, ಇತಿಹಾಸ ಮತ್ತು ಭಾಷೆ ಇದೆ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಯನ್ನು ಅಲ್ಲಗಳೆದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ನಮ್ಮ ದೇಶವು ಬಹು ಸಂಸ್ಕೃತಿ, ಇತಿಹಾಸ ಮತ್ತು ವಿವಿಧ ಭಾಷೆಗಳನ್ನು ಹೊಂದಿದೆ. ಆದನ್ನು ಪ್ರಧಾನ ಮಂತ್ರಿ ಗೌರವಿಸುವಂತೆ ಒತ್ತಾಯಿಸಿದರು.

ತಿರುನೆಲ್ವೇಲಿಯಲ್ಲಿ ನಡೆದ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಭಾರತಕ್ಕೆ ಒಂದು ಸಂಸ್ಕೃತಿ, ಒಂದು ಇತಿಹಾಸ ಮತ್ತು ಒಂದು ಭಾಷೆ ಇದೆ ಎಂದು ಪ್ರಧಾನಿ ಹೇಳುತ್ತಾರೆ. ತಮಿಳು ಇತಿಹಾಸವು ಭಾರತೀಯ ಇತಿಹಾಸವಲ್ಲವೇ? ಅಥವಾ ತಮಿಳು ಸಂಸ್ಕೃತಿ ಭಾರತೀಯ ಸಂಸ್ಕೃತಿಯಲ್ಲವೇ?, ಭಾರತವು ಅನೇಕ ರೀತಿಯ ಸಂಸ್ಕೃತಿ, ಇತಿಹಾಸ ಮತ್ತು ಭಾಷೆಗಳನ್ನು ಹೊಂದಿದೆ. ಪ್ರಧಾನಿ ಮೋದಿಯವರು ಪ್ರತಿ ಭಾಷೆ ಮತ್ತು ಸಂಸ್ಕೃತಿಯನ್ನು ಗೌರವಿಸಬೇಕು” ಎಂದು ರಾಹುಲ್ ಗಾಂಧಿ ಹೇಳಿದರು.

ಏಪ್ರಿಲ್ 6ರಂದು ತಮಿಳುನಾಡು ವಿಧಾನಸಭಾ ಚುನಾವಣೆ ಒಂದೇ ಹಂತದಲ್ಲಿ ನಡೆಯಲಿದೆ. ಮೇ 2ರಂದು ಮತ ಎಣಿಕೆ ನಡೆಯಲಿದೆ ಎಂದು ಭಾರತದ ಚುನಾವಣಾ ಆಯೋಗ ನಿನ್ನೆ ಘೋಷಿಸಿದೆ. 234 ಸ್ಥಾನಗಳಿಗೆ ಮತದಾನ ನಡೆಯಲಿದ್ದು, ಕಾಂಗ್ರೆಸ್-ಡಿಎಂಕೆ ಮತ್ತು ಬಿಜೆಪಿ-ಎಐಎಡಿಎಂಕೆ ಮೈತ್ರಿಯು ಪರಸ್ಪರ ವಿರುದ್ಧವಾಗಿ ಸ್ಪರ್ಧಿಸಲಿವೆ.

Edited By : Nagaraj Tulugeri
PublicNext

PublicNext

01/03/2021 02:50 pm

Cinque Terre

50.12 K

Cinque Terre

11

ಸಂಬಂಧಿತ ಸುದ್ದಿ