ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೋದಿ ನೆಲಮಟ್ಟದ ನಾಯಕ: ಪ್ರಧಾನಿಯನ್ನು ಹಾಡಿ ಹೊಗಳಿದ 'ಆಜಾದ್'

ಶ್ರೀನಗರ: ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನನಗೆ ರಾಜಕೀಯವಾಗಿ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ. ಆದರೂ ಅವರಲ್ಲಿರುವ ಒಳ್ಳೆಯ ಗುಣಗಳನ್ನು ಒಪ್ಪಿಕೊಳ್ಳಲು ನನಗೆ ಯಾವುದೇ ತಕರಾರಿಲ್ಲ ಎಂದು ಕಾಂಗ್ರೆಸ್​ನ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಶ್ಲಾಘಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ಮೂರು ದಿನಗಳ ಭೇಟಿ ನೀಡಿರುವ ಆಜಾದ್ ಅವರನ್ನು ಗುಜ್ಜಾರ್ ದೇಶ ಚಾರಿಟೇಬಲ್ ಟ್ರಸ್ಟ್ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಈ ವೇಳೆ ಮಾತನಾಡಿದ ಅವರು, ‘ನಮ್ಮ ಹಿನ್ನೆಲೆಯನ್ನು ನಾವೆಂದೂ ಮರೆಮಾಚಬಾರದು. ಪ್ರಧಾನಿ ನರೇಂದ್ರ ಮೋದಿ ಇಂದಿಗೂ ತಮ್ಮನ್ನು ತಾವು ಹೆಮ್ಮೆಯಿಂದ ಚಾಯ್​ವಾಲಾ ಎಂದು ಕರೆದುಕೊಳ್ಳುತ್ತಾರೆ. ನಾವು ಎಷ್ಟು ಎತ್ತರಕ್ಕೆ ಏರಿದರೂ ನಮ್ಮ ಮೂಲ ಮರೆಯಬಾರದು ಎಂಬ ಪಾಠವನ್ನು ಪ್ರಧಾನಿಯಿಂದ ಕಲಿಯಬೇಕು' ಎಂದು ತಿಳಿಸಿದರು.

'ನಮ್ಮ ಹಿನ್ನೆಲೆಯ ಬಗ್ಗೆ ನಾವು ಗರ್ವದಿಂದ ಹೇಳಿಕೊಳ್ಳಬೇಕು. ನಮ್ಮ ಹಿನ್ನೆಲೆಯನ್ನು ಎಂದಿಗೂ ಮುಚ್ಚಿಡಬಾರದು. ನಾನು ಇಡೀ ಜಗತ್ತು ಸುತ್ತಿದ್ದೇನೆ. ಫೈವ್​ ಸ್ಟಾರ್, ಸೆವೆನ್ ಸ್ಟಾರ್ ಹೋಟೆಲ್​ಗಳಲ್ಲಿ ಉಳಿದುಕೊಂಡಿದ್ದೇನೆ. ಅವೆಲ್ಲವೂ ಈಗ ಹೋಗಿದೆ. ಆದರೆ ನನ್ನ ಊರು ನನಗೆ ಉಳಿದಿದೆ’ ಎಂದು ಭಾವುಕರಾಗಿ ನುಡಿದರು.

Edited By : Vijay Kumar
PublicNext

PublicNext

28/02/2021 04:28 pm

Cinque Terre

114.21 K

Cinque Terre

8

ಸಂಬಂಧಿತ ಸುದ್ದಿ