ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಿಲ್ಲದ 'ಮಹಾ' ಕಿರಿಕ್: ಬಸ್ ನಿಲ್ದಾಣದೊಳಗೆ ಕರ್ನಾಟಕ ಬಸ್​​ಗಳಿಗೆ ನೋ ಎಂಟ್ರಿ

ಬೆಳಗಾವಿ: ಗಡಿ ವಿಚಾರವಾಗಿ ಕರ್ನಾಟಕದೊಂದಿಗೆ ಮಹಾರಾಷ್ಟ್ರ ಸರ್ಕಾರ ಪದೇ ಪದೇ ಕಿರಿಕ್ ಮಾಡುತ್ತಿದೆ. ಈ ಬಾರಿ ಮಹಾರಾಷ್ಟ್ರ ಸಾರಿಗೆ ಇಲಾಖೆ ಅಧಿಕಾರಿಗಳು ಕರ್ನಾಟಕದ ಸಾರಿಗೆ ಬಸ್​​​ಗಳನ್ನು ನಿಲ್ದಾಣಕ್ಕೆ ಪ್ರವೇಶ ನಿರಾಕರಿಸಿ ಉದ್ಧಟತನ ತೋರಿದ್ದಾರೆ.

ಕೊಲ್ಹಾಪುರ ಬಸ್ ನಿಲ್ದಾಣದೊಳಗೆ ಕರ್ನಾಟಕ ಬಸ್​​​ಗಳಿಗೆ ಪ್ರವೇಶ ನಿರಾಕರಿಸಿದ್ದಾರೆ. ಇದರಿಂದಾಗಿ ಬಸ್​​ಗಳು ಹೊರಗಡೆಯಿಂದಲೇ ವಾಪಸ್​ ಆಗುತ್ತಿವೆ. ಈ ಕ್ರಮದಿಂದ ಸಾರಿಗೆ ಇಲಾಖೆ ಸಿಬ್ಬಂದಿ ಜನರನ್ನು ತುಂಬಿಸಿಕೊಳ್ಳಲಾಗದೇ ಖಾಲಿಯಾಗಿಯೇ ವಾಪಸ್ ಆಗುವ ಅನಿವಾರ್ಯ ಪರಿಸ್ಥಿತಿಯನ್ನು ಎದುರಿಸಿದ್ದಾರೆ.

ಕರ್ನಾಟಕ ಮತ್ತು ಮಹಾರಾಷ್ಟ್ರದ ನಡುವೆ ನಿತ್ಯ 400ಕ್ಕೂ ಅಧಿಕ ಕರ್ನಾಟಕದ ಬಸ್​​ಗಳ ಸಂಚಾರವಿದೆ. ಸದ್ಯ ಮಹಾರಾಷ್ಟ್ರದ ಕ್ರಮಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಗಡಿಯಲ್ಲಿ ಮಹಾರಾಷ್ಟ್ರ ಬಸ್ ತಪಾಸಣೆಯ ಸೇಡು ತೀರಿಸಿಕೊಳ್ಳಲು ಮುಂದಾಗಿದೆಯಾ ಎಂಬ ಪ್ರಶ್ನೆ ಎದುರಾಗಿದೆ.

Edited By : Vijay Kumar
PublicNext

PublicNext

27/02/2021 06:03 pm

Cinque Terre

57.95 K

Cinque Terre

1

ಸಂಬಂಧಿತ ಸುದ್ದಿ