ಚಿಕ್ಕೋಡಿ: ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕವೂ ಅಯೋಧ್ಯೆಯ ರಾಮ ಮಂದಿರ ವಿವಾದಿತ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಸಚಿವ ಕೆ.ಎಸ್.ಈಶ್ವರಪ್ಪ ತಿರುಗೇಟು ನೀಡಿದ್ದಾರೆ. ಬೆಳಗಾವಿ ಜಿಲ್ಲೆ ಕಾಗವಾಡ ತಾಲೂಕಿನ ಕೌಲಗುಡ್ಡ ಗ್ರಾಮದಲ್ಲಿ ಕರಿಯೋಗಸಿದ್ದೇಶ್ವರ ಕನ್ನಡ ಮಾಧ್ಯಮಿಕ ಶಾಲಾ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿ ಬಳಿಕ ಅವರು ಮಾತನಾಡಿದರು.
ಸಿದ್ದರಾಮಯ್ಯ ಒಬ್ಬ ವಕೀಲ ಎಂದು ಹೇಳಿಕೊಳ್ಳಲು ಅವರಿಗೆ ನಾಚಿಕೆಯಾಗಬೇಕು. ಸುಪ್ರೀಂ ತೀರ್ಪಿನ ಬಳಿಕವೂ ರಾಮ ಮಂದಿರದ ಜಾಗ ವಿವಾದಿತ ಎಂದು ಹೇಳುತ್ತಿದ್ದಾರೆ. ಹೀಗಾಗಿ ರಾಜ್ಯದ ಜನ ಅವರನ್ನು ಛೀ, ಥೂ ಎಂದು ಉಗಿಯುತ್ತಿದ್ದಾರೆ ಎಂದು ಕಿಡಿಕಾರಿದರು.
ಹಣ ಕೊಡದಿದ್ದರೆ ಕೊಡಬೇಡ ಬಿಡು ಎಂದು ಏಕವಚನದಲ್ಲೇ ಹರಿಹಾಯ್ದ ಈಶ್ವರಪ್ಪ, ಹಣ ಕೊಡದೆ ಲೆಕ್ಕ ಕೇಳುತ್ತಾರೆ ಎಂದು ಹರಿಹಾಯ್ದರು. ರಾಜ್ಯದ ಜನ, ದೇಶದ ಜನ ರಾಮನ ಬಗ್ಗೆ ಅಪಮಾನ ಮಾಡಿದ್ದಕ್ಕೆ ಕಾಂಗ್ರೆಸ್ ತಿರಸ್ಕಾರ ಮಾಡಿದ್ದಾರೆ. ಇನ್ನೆಷ್ಟು ದಿನ ಮಾತಾಡುತ್ತಾರೆ ಮಾತಾಡಲಿ ಎಂದರು.
PublicNext
26/02/2021 06:54 pm