ಪೆಟ್ರೋಲ್, ಡೀಸೆಲ್ ದರ ಏರಿಕೆ ವಿರುದ್ಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನೆಡೆಸುವ ಮೂಲಕ ಕೇಂದ್ರ ಸರಕಾರಕ್ಕೆ ಟಾಂಗ್ ಕೊಟ್ಟಿದ್ದಾರೆ. ಎಲೆಕ್ಟ್ರಿಕ್ ಸ್ಕೂಟರ್ ನ ಹಿಂಬದಿಯಲ್ಲಿ ಕುಳಿತು ಪ್ರಯಾಣಿಸಿದ ಮಮತಾ ಬ್ಯಾನರ್ಜಿ, ತೈಲ ಬೆಲೆ ಏರಿಕೆ ವಿರುದ್ಧ ವಿಭಿನ್ನ ರೋಡ್ ಶೋ ನಡೆಸಿದ್ದಾರೆ.
ಕೊಲ್ಕತ್ತಾ ಮೇಯರ್ ಹಾಗೂ ರಾಜ್ಯ ಸಚಿವರಾಗಿರುವ ಫರೀದ್ ಹಕೀಮ್ ಅವರು ಚಲಾಯಿಸುತ್ತಿದ್ದ, ಎಲೆಕ್ಟ್ರಿಕ್ ಸ್ಕೂಟರ್ ನ ಹಿಂಬದಿ ಕುಳಿತು, ಬೆಲೆ ಏರಿಕೆ ವಿರೋಧಿ ಫಲಕ ಹಿಡಿದು ನಬಣ್ಣ (ಸರ್ಕಾರದ ಕಾರ್ಯಾಲಯ)ಕ್ಕೆ ಆಗಮಿಸಿದ ಮಮತಾ ಬ್ಯಾನರ್ಜಿ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಕುತ್ತಿಗೆಯಲ್ಲಿ ಇಂಧನ ದರ ಏರಿಕೆ ವಿರುದ್ಧದ ಭಿತ್ತಿ ಪತ್ರವನ್ನು ಹಾಕಿಕೊಂಡು ಗಮನ ಸೆಳೆದರು. ಪ್ರತಿಭಟನೆಯ ಬಳಿಕ ದೀದಿ ತಾವೇ ಸ್ವತಹ ಬೈಕ್ ಓಡಿಸಲು ಮುಂದಾಗಿ ನಗೆಪಾಟಲಿಗೆ ಇಡಾಗಿದ್ದಾರೆ. ಆ ಕುರಿತ ವಿಡಿಯೋ ಇಲ್ಲಿದೆ ನೋಡಿ..
PublicNext
26/02/2021 10:08 am