ಗದಗ : ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಾಂಗ್ರೆಸ್ ನಾಯಕ ಹೆಚ್.ಕೆ. ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆ, ನೂತನ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಗದಗದಲ್ಲಿ ನಡೆದ ಪ್ರತಿಭಟನೆ rally ನಂತರ ವಾಗ್ದಾಳಿ ನಡೆಸಿದ ಹೆಚ್.ಕೆ. ಪಾಟೀಲ್, ‘ಗಡ್ಡ ಬಿಟ್ಟರೆ ನೀವು ರವೀಂದ್ರನಾಥ ಟ್ಯಾಗೋರ್ ಆಗುವುದಿಲ್ಲ, ಸೇನೆಯ ಸಮವಸ್ತ್ರ ಧರಿಸಿದರೆ ನೀವು ಸುಭಾಶ್ ಚಂದ್ರ ಬೋಸ್ ಆಗಲ್ಲ, ಕೈ ಎತ್ತಿ ತೋರಿಸಿದರೆ ನೀವು ಅಂಬೇಡ್ಕರ್ ಅಲ್ಲ. ಹೆಗಲಮೇಲೆ ಶಾಲು ಹಾಕಿಕೊಂಡರೆ ಸರ್ದಾರ್ ವಲ್ಲಭಭಾಯ್ ಪಟೇಲ್ ನೀವಾಗಲ್ಲ.' ಎಂದು ಟೀಕಿಸಿದ್ದಾರೆ.
ಸುಳ್ಳು ಹೇಳುತ್ತಾ ದೇಶದ ಜನರಿಗೆ ಮೋದಿ ಮೋಸ ಮಾಡುತ್ತಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಕೊರೊನಾ ಸಂಕಷ್ಟದಲ್ಲಿದ್ದ ಜನರಿಂದ ಸುಲಿಗೆ ಮಾಡಲಾಗುತ್ತಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಬೆಲೆ ಇಳಿಕೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದ್ದಾರೆ.
PublicNext
26/02/2021 10:02 am