ಕೊಲ್ಕತ್ತಾ: ಖ್ಯಾತ ಬೆಂಗಾಲಿ ನಟಿ ಪಾಯಲ್ ಸರ್ಕಾರ್ ಇಂದು ಬಿಜೆಪಿ ಸೇರ್ಪಡೆಯಾಗಿದ್ದಾರೆ. 5 ರಾಜ್ಯಗಳ ವಿಧನಾಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೆ.ಪಿ.ನಡ್ಡಾ ಇಂದು ಕೋಲ್ಕತ್ತಾ ಆಗಮಿಸಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಸಮ್ಮುಖದಲ್ಲಿ ಪಾಯಲ್ ಸರ್ಕಾರ್ ಬಿಜೆಪಿ ಸೇರ್ಪಡೆಯಾಗಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಬಿಜೆಪಿ ಧ್ವಜ ನೀಡಿ ನಟಿ ಪಾಯಲ್ ಸರ್ಕಾರ್ ಅವರನ್ನು ಸ್ವಾಗತಿಸಿದ್ದಾರೆ. ಕಳೆದ ವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮ್ಮುಖದಲ್ಲಿ ಬೆಂಗಾಲಿ ನಟರಾದ ಯಶ್ ಮತ್ತು ಹಿರಾನ್ ಕೇಸರಿ ಪಾಳಯಕ್ಕೆ ಸೇರ್ಪಡೆಯಾಗಿದ್ದರು.
PublicNext
25/02/2021 10:54 pm