ಬೆಂಗಳೂರು : ಚಿತ್ರೀಕರಣ ವೇಳೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಮುತ್ತಿಗೆ ವಿಚಾರ ಸಾಕಷ್ಟು ಚರ್ಚೆಯೊಂದಿಗೆ ಸುಖಾಂತ್ಯ ಕಂಡ ಬೆನ್ನಲ್ಲೇ ನಟ ಜಗ್ಗೇಶ ಮತ್ತೊಂದು ಟ್ವೀಟ್ ಮಾಡಿದ್ದಾರೆ. ಕರ್ನಾಟಕದ ಭಾರತೀಯ ಜನತಾ ಪಕ್ಷ(ಬಿಜೆಪಿ) ಘಟಕ ಹೊಸ ವಕ್ತಾರರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ನಟ ಜಗ್ಗೇಶ್ ಅವರು ಬೆಂಗಳೂರು ವಿಭಾಗದ ವಕ್ತಾರರಾಗಿದ್ದಾರೆ.
''ನನಗೆ ರಾಜ್ಯ ಭಾಜಪ ವಕ್ತಾರನಾಗಿ ನೇಮಸಿದ ಪಕ್ಷದ ಹಿರಿಯರಿಗೆ ಧನ್ಯವಾದ.. ಕಾಯವಾಚಮನ ಶುದ್ಧಾತ್ಮನಾಗಿ ಕಾಯಕಮಾಡುವೆ..'' ಎಂದು ಜಗ್ಗೇಶ್ ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ(ಸಂಘಟನೆ) ಗಳಾದ ಬಿ.ಎಲ್ ಸಂತೋಷ್, ಆರ್ ಎಸ್ ಎಸ್ ಸಹ ಕಾರ್ಯವಾಹ ಮುಕುಂದ ಸಿ. ಅರ್, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಜಗ್ಗೇಶ್ ಅವರು ಧನ್ಯವಾದ ಅರ್ಪಿಸಿದ್ದಾರೆ.
ವಕ್ತಾರರ ನೇಮಕ:
ಕ್ಯಾ. ಗಣೇಶ್ ಕಾರ್ಣಿಕ್-ಮಂಗಳೂರು
ಜಗ್ಗೇಶ್- ಬೆಂಗಳೂರು
ರಾಜೂಗೌಡ(ನರಸಿಂಹ ನಾಯಕ್)-ಯಾದಗಿರಿ
ಚಲವಾದಿ ನಾರಾಯಣ ಸ್ವಾಮಿ-ಬೆಂಗಳೂರು
ರಾಜಕುಮಾರ್ ಪಾಟೀಲ್ ತೆಲ್ಕೂರ-ಕಲಬುರಗಿ
ತೇಜಸ್ವಿನಿ ಗೌಡ-ಬೆಂಗಳೂರು
ಗಿರಿಧರ ಉಪಾಧ್ಯಾಯ-ಬೆಂಗಳೂರು
ಪಿ ರಾಜೀವ್-ಬೆಳಗಾವಿ
ಎಂ. ಬಿ ಜಿರಲಿ- ಬೆಳಗಾವಿ
ಮಹೇಶ್-ಮೈಸೂರು
PublicNext
25/02/2021 09:55 am