ಲಕ್ನೋ: ರಾಹುಲ್ ಗಾಂಧಿ ಒಬ್ಬ ನಿಕಮ್ಮೆ ಸಂಸಾದ್ (ಅಸಮರ್ಥ ಸಂಸದ) ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.
ಕೇರಳ ಚುನಾವಣಾ ಪ್ರಚಾರದ ಪಾಲ್ಗೊಂಡಿರುವ ಸ್ಮೃತಿ, ರಾಹುಲ್ ಗಾಂಧಿ ನೀಡಿದ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ಉತ್ತರ ಪ್ರದೇಶದ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಸೋತ ಬಳಿಕ ಕೇರಳದಲ್ಲಿ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ರಾಹುಲ್ ಗಾಂಧಿಯ ನಾಟಕದ ಬಣ್ಣ ಈಗ ಕಳಚಿದೆ. ಅಸಲಿ ಬಣ್ಣ ಗೋಚರಿಸುತ್ತಿದೆ ಎಂದು ಕಾಲೆಳೆದಿದ್ದಾರೆ.
ಅಮೇಥಿ ಜನರು ಅವರಿಗೆ ಎಲ್ಲ ರೀತಿಯ ಅವಕಾಶವನ್ನು ನೀಡಿದರೂ ಕೂಡ, ಅವರು ಅಮೇಥಿ ಲೋಕಸಭಾ ಸ್ಥಾನ ಉಳಿಸಿಕೊಳ್ಳಲು ಕೇರಳಕ್ಕೆ ಓಡಿ ಹೋದರು. ಹಲವು ವರ್ಷಗಳಿಂದ ಅಮೇಥಿ ಜನತೆ ನಿಕಮ್ಮೆ(ಅಸಮರ್ಥ) ಸಂಸಾದ್‍ನನ್ನು ಸಹಿಸಿಕೊಂಡಿದ್ದರು. ಆದರೆ ಇದೀಗ ಉತ್ತರ ಭಾರತದಲ್ಲಿ ರಾಹುಲ್ ಗೆಲ್ಲಲು ವಿಫಲವಾದ ಬಳಿಕ ಅಮೇಥಿ ಜನತೆಗೆ ರಾಹುಲ್ ಗಾಂಧಿ ಅವಮಾನ ಮಾಡಿದ್ದಾರೆ ಎಂದು ಸ್ಮೃತಿ ಇರಾನಿ ಆಕ್ರೋಶ ವ್ಯಕ್ತಪಡಿಸಿದರು.
PublicNext
24/02/2021 04:37 pm