ಮೈಸೂರು: ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ. ಕಾಂಗ್ರೆಸ್ ಸದಸ್ಯರು ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡಿದ್ದು, ಜೆಡಿಎಸ್ ಅಭ್ಯರ್ಥಿ ರುಕ್ಮಿಣಿ ಮಾದೇಗೌಡಗೆ ಮಹಾನಗರ ಪಾಲಿಕೆ ಮೇಯರ್ ಗಿರಿ ಒಲಿದಿದೆ. ಕೊನೆಯ ಕ್ಷಣದಲ್ಲಿ ಟ್ವಿಸ್ಟ್ ಸಿಕ್ಕ ಹಿನ್ನೆಲೆಯಲ್ಲಿ ಕಮಲ ಪಾಳಯಕ್ಕೆ ಸ್ಥಾನ ಕೈತಪ್ಪಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಕಾಂಗ್ರೆಸ್ ಸದಸ್ಯರು ಜೆಡಿಎಸ್ ಗೆ ಬೆಂಬಲ ನೀಡಿದ್ದಾರೆ. ತಮಗೆ ಲಾಭ ಇಲ್ಲದಿದ್ದರೂ ಬಿಜೆಪಿಗೆ ಮೇಯರ್ ಗಿರಿ ಧಕ್ಕದಂತೆ ಕಾಂಗ್ರೆಸ್ ಮಾಸ್ಟರ್ ಪ್ಲಾನ್ ಮಾಡಿ ಜೆಡಿಎಸ್ ಅಭ್ಯರ್ಥಿಗೆ ಸಾಥ್ ನೀಡಿ ರುಕ್ಮಿಣಿ ಮಾದೇಗೌಡಗೆ ಮೇಯರ್ ಗಿರಿ ದೊರೆಯುವಂತೆ ಮಾಡಿದೆ.
ಇನ್ನು ಜೆಡಿಎಸ್ ಪಕ್ಷದ ರುಕ್ಮಿಣಿ ಮಾದೇಗೌಡ 43 ಮತಗಳನ್ನ ಪಡೆಯುವ ಮೂಲಕ ಪಾಲಿಕೆಯ 23 ನೇ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಇತ್ತ ಬಿಜೆಪಿ ಪಕ್ಷದ ಸುನಾಂದ ಪಾಲನೇತ್ರಗೆ 26 ಮತ ಪಡೆಯಲು ಶಕ್ತರಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಶಾಂತಕುಮಾರಿ ಯಾವೊಂದು ಮತಗಳನ್ನು ಪಡೆದಿಲ್ಲ.
PublicNext
24/02/2021 01:15 pm