ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಧಾನಪರಿಷತ್ ನಲ್ಲಿ ಇನ್ಮುಂದೆ ಮೊಬೈಲ್ ಬಳಸಂಗಿಲ್ಲ ಹೊರಟ್ಟಿ

ಬೆಂಗಳೂರು: ವಿಧಾನಪರಿಷತ್ ಕಲಾಪದ ವೇಳೆ ಪರಿಷತ್ ಸದಸ್ಯರು ಹಾಗೂ ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ ಯಾರೊಬ್ಬರಿಗೂ ಮೊಬೈಲ್ ಬಳಸಲು ಅವಕಾಶ ಇರಲ್ಲ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಹೊರಟ್ಟಿ, ವಿಧಾನಪರಿಷತ್ ಕಲಾಪದಲ್ಲಿ ಸಂಪೂರ್ಣವಾಗಿ ಮೊಬೈಲ್ ಬ್ಯಾನ್ ಆಗಲಿದೆ. ಕಲಾಪದ ವೇಳೆ ಮಾಧ್ಯಮಗಳನ್ನ ದೂರ ಇಡುವ ಪ್ರಶ್ನೆಯೇ ಇಲ್ಲ. ಕೊರೊನಾ ಕಾರಣಕ್ಕೆ ಇನ್ನೂ ಮಾಧ್ಯಮ ಗ್ಯಾಲರಿಗೆ ಅವಕಾಶ ಕೊಟ್ಟಿಲ್ಲ. ಮುಂದಿನ ದಿನಗಳಲ್ಲಿ ಮಾಧ್ಯಮಗಳಿಗೆ ಅನುಕೂಲವಾಗುವಂತೆ ಮಾಡುತ್ತೇವೆ. ಬೇರೆಡೆ ಮಾಧ್ಯಮಗಳನ್ನ ನಿಷೇಧಿಸಲಾಗಿದೆ. ನಮ್ಮಲ್ಲಿ ಬ್ಯಾನ್ ಮಾಡುವ ಅವಶ್ಯಕತೆಯೇ ಇಲ್ಲ ಎಂದರು.

ಪ್ರಕಾಶ್ ರಾಥೋಡ್ ಮೊಬೈಲ್ ವೀಕ್ಷಣೆ ವಿಚಾರವೇ ಇಡೀ ದಿನ ಸುದ್ದಿಯಾಗಿತ್ತು. ಇದರಿಂದ ಇಡೀ ಸದನದ ಗೌರವ ಮಣ್ಣಾಗುತ್ತೆ. ಯಾವುದೋ ಒಂದು ಸಣ್ಣ ಘಟನೆಯನ್ನೇ ದೊಡ್ಡದಾಗಿ ತೋರಿಸಲಾಗುತ್ತೆ ಎಂದು ಅಸಮಾಧಾನಿಸಿದ ಬಸವರಾಜ್ ಹೊರಟ್ಟಿ, ಕೆಲವೊಂದು ನಿಯಮ ರೂಪಿಸಲು ಮುಂದಾಗಿರುವ ಬಗ್ಗೆ ಸುಳಿವು ಕೊಟ್ಟರು.

Edited By : Nirmala Aralikatti
PublicNext

PublicNext

23/02/2021 02:38 pm

Cinque Terre

59.58 K

Cinque Terre

4

ಸಂಬಂಧಿತ ಸುದ್ದಿ