ಪಡುಬಿದ್ರಿ: ಆರ್ ಎಸ್ ಎಸ್ ಸ್ವಾತಂತ್ರ್ಯ ಹೋರಾಟದಲ್ಲಿ ಎಂದಾದರೂ ಭಾಗವಹಿಸಿತ್ತಾ?ಹೆಡಗೇವಾರ್, ಗುರೂಜಿ ಗೋಲ್ವಾಲ್ಕರ್ ಸ್ವಾತಂತ್ರ್ಯ ಹೋರಾಟಗಾರರಾ? ದೇಶಕ್ಕಾಗಿ ಬಿಜೆಪಿಯಿಂದ ಒಬ್ಬನಾದ್ರು ಸತ್ತಿದ್ದಾನಾ? ಮಹಾತ್ಮ ಗಾಂಧಿ ಅವರನ್ನು ಕೊಂದವರಿಂದ ದೇಶಭಕ್ತಿ ಪಾಠ ಕಲಿಯಬೇಕಾ?
ಇವು ಉಡುಪಿ ಜಿಲ್ಲೆಯ ಪಡುಬಿದ್ರಿಯಲ್ಲಿ ನಡೆದ ಕಾಂಗ್ರೆಸ್ ಪಾದಯಾತ್ರೆ ಸಂದರ್ಭ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಳಿದ ಪ್ರಶ್ನಾವಳಿ. ಮೋದಿ ಸ್ವಾತಂತ್ರ್ಯ ಬಂದ ಮೇಲೆ ಹುಟ್ಟಿದ ಗಿರಾಕಿಯಾದರೆ ನಾನು ಸ್ವಾತಂತ್ರ್ಯಕ್ಕಿಂತ 12 ದಿನ ಮೊದಲೇ ಹುಟ್ಟಿದ್ದೇನೆ.
ಮೋದಿ ಎದೆ ಎಷ್ಟಿಂಚು ಎಂಬುದು ಮುಖ್ಯ ಅಲ್ಲ, ಮೋದಿಗೆ ಜನಪರ ಹೃದಯವೇ ಇಲ್ಲದಿದ್ದರೆ ಏನು ಪ್ರಯೋಜನ? ಎಂದರು.
ಯಡಿಯೂರಪ್ಪ ಡೋಂಗಿ ರೈತನ ಮಗ ಎಂದ ಅವರು, ಯಡಿಯೂರಪ್ಪ ರೈತರ ಮೇಲೆ ಗೋಲಿಬಾರ್ ಮಾಡಿ ಕೊಂದು ಹಾಕಿದ. ಸಾಲಮನ್ನಾ ಮಾಡುವ ನೈತಿಕತೆ ಯಡಿಯೂರಪ್ಪಗೆ ಇಲ್ಲ. ಹಸಿರು ಶಾಲು ಹಾಕಲು ಯಡಿಯೂರಪ್ಪಗೆ ನೈತಿಕತೆಯೇ ಇಲ್ಲ ಎಂದ ಸಿದ್ದು,
ಡೋಂಗಿ ರೈತನ ಮಗ ಅಕ್ಕಿಯನ್ನು ಎರಡು ಕೆ.ಜಿ.ಗೆ ಇಳಿಸಿದ! ಬಿಜೆಪಿಯನ್ನು ರಾಜ್ಯದ ಜನ ಕಿತ್ತೊಗೆಯಬೇಕು. ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ 10 ಕೆ.ಜಿ. ಉಚಿತ ಅಕ್ಕಿ ನೀಡುತ್ತೇವೆ.
ಯಡಿಯೂರಪ್ಪನಷ್ಟು ಲಂಚಕೋರ, ಭ್ರಷ್ಟಾಚಾರಿ ಬೇರೆ ಇಲ್ಲ. ಯಡಿಯೂರಪ್ಪ ಚೆಕ್ ಮೂಲಕ ಲಂಚ ತಗೋತಿದ್ದ. ವಿಜಯೇಂದ್ರ ಆರ್ ಟಿಜಿಎಸ್ ಮೂಲಕ ಲಂಚ ತೆಗೆದುಕೊಳ್ಳುತ್ತಿದ್ದಾನೆ ಎಂದು ಆರೋಪಗಳ ಸುರಿಮಳೆಗೈದರು.
PublicNext
22/02/2021 05:29 pm