ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ನಡೆಯುತ್ತಿರುವ ಹೋರಾಟ ದಿನೇ ದಿನೇ ತೀವ್ರ ಸ್ವರೂಪ ಪಡೆಯುತ್ತಿದೆ.
ನಿನ್ನೆ ಹೋರಾಟದ ನೇತೃತ್ವ ವಹಿಸಿದ ವಚನಾನಂದ ಸ್ವಾಮೀಜಿ ಹಾಗೂ ಬಸವ ಜಯ ಮೃತ್ಯುಂಜಯ ಸ್ವಾಮೀಜಿಗಳನ್ನ ಸರ್ಕಾರದ ಪರವಾಗಿ ಸಚಿವರಾದ ಸಿ. ಸಿ ಪಾಟೀಲ್ ಹಾಗೂ ಮುರುಗೇಶ್ ನಿರಾಣಿ ಭೇಟಿಯಾಗಿದ್ದಾರೆ. ಹೋರಾಟ ಹಿಂಪಡೆಯುವಂತೆ ಮನವಿ ಮಾಡಿದ್ದಾರೆ. ಆದ್ರೆ ಈ ಸಂಧಾನ ವಿಫಲವಾಗಿದೆ. ಹೋರಾಟ ಮತ್ತಷ್ಟು ಪ್ರಬಲವಾಗಿದೆ.
ಈ ನಡುವೆ ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ ಸಚಿವ ಮುರುಗೇಶ್ ನಿರಾಣಿ, ತಮ್ಮದೇ ಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ಯತ್ನಾಳ್ ನೀನು ಕೂಡಲೇ ರಾಜೀನಾಮೆ ಕೊಡು. ಪಕ್ಷವೇ ನಿನ್ನನ್ನು ಈ ಮಟ್ಟಕ್ಕೆ ಬೆಳೆಸಿದೆ. ನೀನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮತ್ತೆ ಚುನಾವಣೆಗೆ ಸ್ಪರ್ಧಿಸಿ ಗೆದ್ದು ಬಾ. ನೀನು ಕಾಂಗ್ರೆಸ್ಸಿನ ಬಿ ಟೀಂ ಎಂದರು.
ಇದು ಪಂಚಮಸಾಲಿ ಸಮಾವೇಶ ಅಲ್ಲ. ಕಾಶಪ್ಪನವರ್ ಅವರ ಕುಟುಂಬದ ಸಮಾವೇಶ. ಕಾಶಪ್ಪನವರ್ ಹಾಗೂ ಯತ್ನಾಳ್ ಕೂಡಿ ಇಬ್ಬರು ಸ್ವಾಮಿಗಳನ್ನು ತಮ್ಮ ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿದ್ದಾರೆ. ಸ್ವಾಮಿಗಳು ಈ ಇಬ್ಬರ ಮಾತು ಕೇಳಬಾರದು ಎಂದು ಕೋರಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿ ಸಚಿವ ಸಿ. ಸಿ ಪಾಟೀಲ್ ಪಾಲ್ಗೊಂಡಿದ್ದರು.
PublicNext
22/02/2021 01:46 pm