ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲವ್ ಜಿಹಾದ್ ವಿಚಾರದಲ್ಲಿ ಕೇರಳ ಸರ್ಕಾರ ನಿದ್ದೆ ಮಾಡ್ತಿದೆ: ಯೋಗಿ

ಕಾಸರಗೋಡು: 2009ರಲ್ಲೇ ಕೇರಳ ಹೈಕೋರ್ಟ್ ಲವ್ ಜಿಹಾದ್ ವಿರುದ್ಧ ಹೇಳಿಕೆ ನೀಡಿದೆ. ಆದರೂ ಕೇರಳ ಸರ್ಕಾರ ಈ ವಿಚಾರದಲ್ಲಿ ಯಾವುದೇ ಕ್ರಮ ಕೈಗೊಳ್ಳದೇ ನಿದ್ದೆ ಮಾಡುತ್ತಿದೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯ ನಾಥ್ ಹೇಳಿದ್ದಾರೆ.

ಕೇರಳ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಕೆ.ಸುರೇಂದ್ರನ್ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿರುವ ‘ವಿಜಯ ಯಾತ್ರೆ’ ಉದ್ಘಾಟಿಸಿದ ಯೋಗಿ ಆದಿತ್ಯನಾಥ್ ನಂತರ ಮಾತನಾಡಿದರು.

‘ಲವ್ ಜಿಹಾದ್ ಕೇರಳವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಪರಿವರ್ತಿಸಲಿದೆ ಎಂದು 2009ರಲ್ಲಿ ಕೇರಳ ಹೈಕೋರ್ಟ್ ಕಳವಳ ವ್ಯಕ್ತಪಡಿಸಿತ್ತು. ಆದರೆ, ಕೇರಳ ಸರ್ಕಾರವು ನಿದ್ದೆ ಮಾಡುತ್ತಿದೆ. ನಮ್ಮ ಸರ್ಕಾರವು (ಉತ್ತರ ಪ್ರದೇಶ) ಲವ್ ಜಿಹಾದ್ ಮತ್ತು ಬಲವಂತದ ಮತಾಂತರ ತಡೆಗೆ ಕಾನೂನು ರೂಪಿಸಿದೆ’ ಎಂದು ಯೋಗಿ ಹೇಳಿದ್ದಾರೆ.

Edited By : Nagaraj Tulugeri
PublicNext

PublicNext

22/02/2021 08:15 am

Cinque Terre

63.98 K

Cinque Terre

14

ಸಂಬಂಧಿತ ಸುದ್ದಿ