ಬೆಂಗಳೂರು: ನೋಟಿಸ್ ಕೊಟ್ಟರೆ ಅಂಜುವ ಮಗ ನಾನಲ್ಲ. ನನ್ನನ್ನು ಅಂಜಿಸುತ್ತೇನೆ ಎಂದು ತಿಳಿದಿದ್ದರೆ ಆದಷ್ಟು ಬೇಗ ಕುರ್ಚಿ ಖಾಲಿ ಮಾಡಿಸಬೇಕಾಗುತ್ತೆ ಎಂದು ಶಾಸಕ ಬಸಗೌಡ ಪಾಟೀಲ್ ಯತ್ನಾಳ್ ಸಿಎಂ ಯಡಿಯೂರಪ್ಪ ಅವರಿಗೆ ನೇರವಾಗಿ ತಿರುಗೇಟು ನೀಡಿದ್ದಾರೆ.
ಪಂಚಮಸಾಲಿ ಸಮಾವೇಶದಲ್ಲಿ ಮಾತನಾಡಿದ ಅವರು, ನನಗೆ ನೋಟಿಸ್ ಕೊಟ್ಟರೂ ನನ್ನ ಬಾಯಿ ಬಂದ್ ಆಗುವುದಿಲ್ಲ. ನಾನು ಯಾರಿಗೂ ಪಂಪ್ ಹೊಡೆಯುವ ರಾಜಕಾರಣಿ ಅಲ್ಲ. ಪಂಚಮಸಾಲಿ ಸಮುದಾಯಕ್ಕೆ 2ಎ ಕೊಡುತ್ತೇವೆ ಅಂತ ಹೇಳಿ ಈಗ ಹೊಸ ನಾಟಕ ಶುರು ಮಾಡಿದ್ದಾರೆ. ನಿಮ್ಮ ಮಕ್ಕಳು ಮೊಮ್ಮಕ್ಕಳು ಸಲುವಾಗಿ ಸರ್ಕಾರ ಮಾಡಬೇಡಿ, ನಾವು ನಮ್ಮ ಸಮುದಾಯದ ಮಕ್ಕಳ ಸಲುವಾಗಿ ಬಂದಿದ್ದೇವೆ. ವೀರೇಂದ್ರ ಪಾಟೀಲ್ ತಮ್ಮ ಮಕ್ಕಳನ್ನು ರಾಜಕೀಯಕ್ಕೆ ತರಲಿಲ್ಲ ಎಂದು ವಾಗ್ದಾಳಿ ನಡೆಸಿದರು.
PublicNext
21/02/2021 02:50 pm