ಬೆಂಗಳೂರು: ಜನರಿಗೆ ಮುಖ ತೋರಿಸಲಾಗದೆ ಪ್ರಧಾನಿ ನರೇಂದ್ರ ಮೋದಿ ಗಡ್ಡ ಬಿಟ್ಟಿದ್ದಾರೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಇಂದು ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ''ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ನಿರಂತರವಾಗಿ ಏರುತ್ತಿದ್ದು, ಜನಸಾಮಾನ್ಯರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಜನರಿಗೆ ಮುಖ ಗುರುತು ಸಿಗಬಾರದು ಎಂಬ ಕಾರಣದಿಂದ ಪ್ರಧಾನಿ ಮೋದಿ ಗಡ್ಡ ಬೆಳೆಸಿದ್ದಾರೆ. ಕೇಂದ್ರದಲ್ಲಿ ಅತಿ ಕೆಟ್ಟ ಸರ್ಕಾರ ಈಗ ಅಧಿಕಾರದಲ್ಲಿದೆ. ನರೇಂದ್ರ ಮೋದಿ ಸುಳ್ಳಿಗೆ ಪರ್ಯಾಯ ಪದ. ಮೋದಿ ಮೋದಿ ಎಂದು ಕೂಗುತ್ತಾ ಅವರನ್ನು ಅಧಿಕಾರಕ್ಕೆ ತಂದ ಯುವಸಮೂಹಕ್ಕೆ ಅನ್ಯಾಯ ಮಾಡಿದ್ದಾರೆ. ಅವರ ಬಣ್ಣವನ್ನು ಬಯಲು ಮಾಡುವ ಜವಾಬ್ದಾರಿ ಕಾಂಗ್ರೆಸ್ ಪಕ್ಷದ್ದು'' ಎಂದು ಹೇಳಿದರು.
ಇದೇ ವೇಳೆ ಸಿಎಂ ಯಡಿಯೂರಪ್ಪ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, 'ಕರ್ನಾಟಕದಲ್ಲಿ ಅನೈತಿಕ, ಅಸಮರ್ಥ, ಭ್ರಷ್ಟ ಸರ್ಕಾರವಿದೆ. ಏನು ಕೇಳಿದರೂ ದುಡ್ಡಿಲ್ಲ, ದುಡ್ಡಿಲ್ಲ ಎನ್ನುತ್ತಾರೆ. ದುಡ್ಡಿಲ್ಲ ಎಂದ ಮೇಲೆ ಅಧಿಕಾರದಲ್ಲಿ ಏಕೆ ಇದ್ದೀರಿ. ಕುರ್ಚಿಯಿಂದ ಇಳಿಯಿರಿ. ನಾವು ಯಾರಾದ್ರು ಬಂದು ಕೂರುತ್ತೇವೆ' ಎಂದು ಕಿಡಿಕಾರಿದರು.
PublicNext
21/02/2021 02:19 pm