ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇತಿಹಾಸ ನೆನೆದ ಸಿದ್ದು : ನಮ್ಮವರೇ ರಾಯಣ್ಣನನ್ನು ಹಿಡಿದು ಕೊಟ್ಟವರು.. ದೇಶದ್ರೋಹಿಗಳು..

ಮೈಸೂರು: ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿ,ಗೇರಿಲ್ಲ ಯುದ್ಧ ಮಾಡಿ, ಬ್ರಿಟಿಷರನ್ನು ಬೆಂಬಿಡದೆ ಕಾಡಿದ್ದ ಅಪ್ರತಿಮ ವೀರ ಸಂಗೊಳ್ಳಿ ರಾಯಣ್ಣ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇತಿಹಾಸ ನೆನಪಿಸಿಕೊಂಡಿದ್ದಾರೆ. ಬ್ರಿಟಿಷರಿಗೆ ರಾಯಣ್ಣನನ್ನು ಹಿಡಿಯುವ ಕಿಮ್ಮತ್ತು ಇರಲಿಲ್ಲ ರಾಯಣ್ಣನನ್ನು ನಮ್ಮವರೇ ಹಿಡಿದು ಕೊಟ್ರು, ಇಂಥ ದೇಶ ದ್ರೋಹಿಗಳು ಯಾವಾಗಲೂ ಇರ್ತಾರೆ ಎಂದರು.

ಜಿಲ್ಲೆಯ ಗಂಧನಹಳ್ಳಿ ಗ್ರಾಮದಲ್ಲಿ ದೇವಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಯಣ್ಣ ಹುಟ್ಟಿದ್ದು ಆಗಸ್ಟ್ 15ರಂದು. ಅವರನ್ನ ಗಲ್ಲಿಗೇರಿಸಿದ್ದು ಜನವರಿ 26ರಂದು. ಎರಡು ದಿನ ನಮ್ಮ ದೇಶಕ್ಕೆ ಅತ್ಯಂತ ವಿಶೇಷ ದಿನಗಳು. ನಿಮಗೆ ಗೊತ್ತಾ ಈ ದಿನಗಳು? ಸುಮ್ಮನೆ ಗೊತ್ತಿಲ್ಲದೆ ಮಾತನಾಡಬೇಡಿ. ಕೆಲವರಿಗೆ ಗೊತ್ತಿರುವುದಿಲ್ಲ ಆದರೂ ತಲೆ ಅಲ್ಲಾಡಿಸಿಬಿಡುತ್ತಾರೆ. ತಿಳ್ಕೋಬೇಕು ಇದನ್ನೆಲ್ಲ ಗೊತ್ತಾಯ್ತಾ ಎಂದು ಸಭೆಯಲ್ಲಿದ್ದವರನ್ನು ನಗೆಗಡಲಲ್ಲಿ ತೇಲಿಸಿದ್ದಾರೆ.

ಸಂಗೊಳ್ಳಿ ರಾಯಣ್ಣನ ಪ್ರತಿಮೆ ನಿಮ್ಮೂರಿನಲ್ಲಿ ನಿರ್ಮಾಣ ಆಗಿದೆ. ಅವರ ಪ್ರತಿಮೆನಾ ಯಾಕೇ ನಿರ್ಮಾಣ ಮಾಡ್ತಾರೆ ಗೊತ್ತಾ? ಅವರಂತೆ ದೇಶ ಪ್ರೇಮ ಹುಟ್ಟಲಿ ಅಂತ. ಕುರುಬ ಜಾತಿಯಲ್ಲಿ ಹುಟ್ಟಿದಕ್ಕೆ ಅವರ ಪ್ರತಿಮೆ ಮಾಡೋದಲ್ಲ. ಅವರೇನು ಅರ್ಜಿ ಹಾಕ್ಕೊಂಡು ಕುರುಬ ಜಾತಿಯಲ್ಲಿ ಹುಟ್ಟಿರಲಿಲ್ಲ. ಇದನ್ನ ಅರ್ಥ ಮಾಡಿಕೊಳ್ಳಿ ಎಂದು ನೆರೆದಿದ್ದ ಜನರಿಗೆ ತಿಳಿ ಹೇಳಿದರು. ಇದೇ ವೇಳೆ ಹಳೆ ನೆನಪು ಮೆಲಕು ಹಾಕಿ ಈ ಗ್ರಾಮದ ಜೊತೆ ನನಗೆ ನಿಕಟ ಸಂಪರ್ಕ ಇದೆ ಎಂದರು.

Edited By : Nirmala Aralikatti
PublicNext

PublicNext

19/02/2021 07:52 pm

Cinque Terre

105.17 K

Cinque Terre

32

ಸಂಬಂಧಿತ ಸುದ್ದಿ