ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೋದಿಯಂತಹ ನಾಯಕ ನೂರು ವರ್ಷಕ್ಕೊಮ್ಮೆ ಹುಟ್ಟಿ ಬರ್ತಾರೆ: ಅರುಣ್ ಸಿಂಗ್

ಹಾಸನ: ಬಡತನದ ಬಗ್ಗೆ ಮೋದಿಜೀ ಅವರಿಗೆ ಗೊತ್ತಿದೆ, ಚಿನ್ನದ ಚಮಚ ಇಟ್ಟುಕೊಂಡು ಹುಟ್ಟಿರುವ ರಾಹುಲ್ ಗಾಂಧಿಗೆ ಏನು ಗೊತ್ತಿದೆ ? ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಪ್ರಶ್ನೆ ಹಾಕಿದ್ದಾರೆ.

ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು. ಈ ಹಿಂದಿನ ಕಾಂಗ್ರೆಸ್ ಸರ್ಕಾರಕ್ಕೆ ಬಡವರ ಬಗ್ಗೆ ಕಾಳಜಿ ಇರಲಿಲ್ಲ. ಆದರೆ ಮೋದಿ ಸರ್ಕಾರ ಬಂದಾಗಿನಿಂದಲೂ ಬಡವರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಮೋದಿಯವರು ತ್ಯಾಗಿ ಮತ್ತು ತಪಸ್ವಿ, ನಮ್ಮ ಪ್ರಧಾನಿ ಅಂತ ನಾಯಕ ನೂರು ವರ್ಷಕ್ಕೊಮ್ಮೆ ಹುಟ್ಟಿ ಬರುತ್ತಾರೆ. ಮೋದಿ ಬಗ್ಗೆ ಮಾತನಾಡಲು ಹೋದ್ರೆ ಎರಡು ದಿನಬೇಕಾಗುತ್ತದೆ. ಹೊರ ದೇಶದಲ್ಲಿ ಭಾರತ ದೇಶದ ಸ್ಥಾನಮಾನ ಹೆಚ್ಚಾಗಲು ನಮ್ಮ ಪ್ರಧಾನಮಂತ್ರಿ ಮೋದಿ ಅವರು ಕಾರಣ. ವಿರೋಧ ಪಕ್ಷಗಳು ಜನಪ್ರಿಯ ಯೋಜನೆಗಳನ್ನು ವಿರೋಧ ಮಾಡುತ್ತಿದ್ದಾರೆ. ಏಕೆಂದರೆ ಅವರಲ್ಲಿ ಕಮ್ಯೂನಿಷ್ಟ್ ಗಳಿದ್ದಾರೆ. ದೇಶದ ಅಭಿವೃದ್ಧಿಯನ್ನು ಅವರು ಸಹಿಸುತ್ತಿಲ್ಲ ಎಂದರು.

Edited By : Nagaraj Tulugeri
PublicNext

PublicNext

18/02/2021 04:00 pm

Cinque Terre

72.29 K

Cinque Terre

15

ಸಂಬಂಧಿತ ಸುದ್ದಿ