ನವದೆಹಲಿ: ದೇಶದ ಅನೇಕ ರಾಜ್ಯಗಳಲ್ಲಿ ಈಗಾಗಲೇ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ ದಾಖಲೆಯ 100 ರೂ. ಗಡಿ ದಾಟಿದೆ. ಈ ಬಗ್ಗೆ ಮೊದಲ ಬಾರಿಗೆ ಮೌನ ಮುರಿದ ಪ್ರಧಾನಿ ನರೇಂದ್ರ ಮೋದಿ ಅವರು ತೈಲ ಬೆಲೆ ಏರಿಕೆಯ ಕಾರಣವನ್ನು ಹಿಂದಿನ ಸರ್ಕಾರಗಳ ಹೆಗಲಿಗೆ ವರ್ಗಾಯಿಸಿದ್ದಾರೆ.
ಪ್ರಧಾನಿ ಮೋದಿ ಇಂದು ತಮಿಳುನಾಡಿನಲ್ಲಿ ತೈಲ ಮತ್ತು ಅಡುಗೆ ಅನಿಲಕ್ಕೆ ಸಂಬಂಧಿಸಿದ ಪ್ರಮುಖ ಯೋಜನೆಗಳಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿರು. ಈ ವೇಳೆ ಮಾತನಾಡಿದ ಅವರು, ''ಭಾರತದ ಇಂಧನ ಅವಲಂಬನೆಯನ್ನು ಕಡಿಮೆ ಮಾಡುವತ್ತ ಹಿಂದಿನ ಸರ್ಕಾರಗಳು ಗಮನ ಹರಿಸಿದ್ದರೆ ಮಧ್ಯಮರ್ಗಕ್ಕೆ ಈ ಹೊರೆ ಹೊತ್ತುಗೊಳ್ಳುವ ಸ್ಥಿತಿ ಬರುತ್ತಿರಲಿಲ್ಲ. ವೈವಿಧ್ಯತೆ ಮತ್ತು ಕೌಶಲತೆ ಹೊಂದಿರುವ ನಾವುಗಳು ಇಂಧನದ ಆಮದಿನ ಮೇಲೆ ಇಷ್ಟೊಂದು ಪ್ರಮಾಣದಲ್ಲಿ ಅವಲಂಬನೆ ಆಗಬೇಕೇ'' ಎಂದು ಪ್ರಧಾನಿ ಪ್ರಶ್ನಿಸಿದ್ದಾರೆ.
2019-20ರ ಹಣಕಾಸು ವರ್ಷದಲ್ಲಿ ತನ್ನ ಅಗತ್ಯದಲ್ಲಿ ಶೇ.85ರಷ್ಟು ತೈಲವನ್ನು ಭಾರತ ಆಮದು ಮಾಡಿಕೊಂಡಿದೆ. ಹಾಗೆಯೇ ತನಗೆ ಅಗತ್ಯವಿರುವ ಅನಿಲದಲ್ಲಿ ಸುಮಾರು ಶೇ.53ರಷ್ಟು ಅನಿಲವನ್ನು ಆಮದು ಮಾಡಿಕೊಂಡಿದೆ. ಅಗತ್ಯ ಇಂಧನಗಳ ಬೆಲೆ ಹೆಚ್ಚಳ ನಿಜಕ್ಕೂ ತೀವ್ರ ಕಳವಳಕಾರಿಯಾಗಿದೆ. ಒಂದು ವೇಳೆ ಹಿಂದಿನ ಸರ್ಕಾರಗಳು ಈ ವಿಚಾರದ ಬಗ್ಗೆ ಆಗಲೇ ಗಮನ ಹರಿಸಿದ್ದರೆ ಜನ ಸಾಮಾನ್ಯರಿಗೆ ಇಂದು ಸಮಸ್ಯೆ ಆಗುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.
PublicNext
18/02/2021 09:34 am