ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಡಿಯೂರಪ್ಪ ಅವರ ನಾಯಕತ್ವಕ್ಕೆ ಕೊಡಲಿ‌ ಪೆಟ್ಟು ಕೊಡುವ ಉದ್ದೇಶಕ್ಕೆ ಮೀಸಲಾತಿ ಹೋರಾಟ- ಸಿ ಕೆ.ಸಿ ಪುಟ್ಟಸಿದ್ದ ಶೆಟ್ಟಿ ಆರೋಪ

ಹುಬ್ಬಳ್ಳಿ: ಮೀಸಲಾತಿಗಾಗಿ ಪಾದಯಾತ್ರೆ, ಸಮಾವೇಶ ನಡೆಸುವವರನ್ನ ವೈಭವಿಕರಿಸಲಾಗುತ್ತಿದೆ. ಮೀಸಲಾತಿ ಹೋರಾಟದ ಹಿಂದಿನ ಉದ್ದೇಶವೇ ಬೇರೆ ಇದೆ. ಆರ್ಥಿಕವಾಗಿ ದುರ್ಬಲರಿಗೆ ನ್ಯಾಯ ಕೊಡಿಸುವ ಉದ್ದೇಶ ಹೋರಾಟದಲ್ಲಿಲ್ಲ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಎಂಎಲ್ ಸಿ ಕೆ.ಸಿ ಪುಟ್ಟಸಿದ್ದ ಶೆಟ್ಟಿ ಆರೋಪಿಸಿದರು.

ನಗರದಲ್ಲಿಂದು ಮಾತನಾಡಿದ ಅವರು, ಯಡಿಯೂರಪ್ಪ ಅವರ ನಾಯಕತ್ವಕ್ಕೆ ಕೊಡಲಿ‌ ಪೆಟ್ಟು ಕೊಡುವ ಉದ್ದೇಶಕ್ಕೆ ಮೀಸಲಾತಿ ಹೋರಾಟ ನಡೆದಿದೆ. ಯಡಿಯೂರಪ್ಪ ನವರಿಗೆ

ಪರ್ಯಾಯ ನಾಯಕತ್ವವನ್ನು ಬಿಜೆಪಿಯಲ್ಲಿ ಸೃಷ್ಟಿಸುವ ಉದ್ದೇಶದಿಂದ ಈ ಹೋರಾಟ ನಡೆದಿದೆ. ಮೀಸಲಾತಿ ಹೆಸರಲ್ಲಿ ಜನ ಸೇರಿಸಿ ಸಮಾವೇಶ ನಡೆಸಲಾಗುತ್ತಿದೆ. ಸಿಎಂ ಬಿಎಸ್ ವೈ ಸಹ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಸಚಿವ‌ ಸಂಪುಟದಲ್ಲಿ ಚರ್ಚಿಸಿ ನಿರ್ಧಾರಿಸುವುದಾಗಿ ಹೇಳುತ್ತಿದ್ದಾರೆ ಸಚಿವ ಸಂಪುಟದ ಸಭೆ ನಿರ್ಧರಿಸಿ ಮೀಸಲಾತಿ ನೀಡಲು ಸಾದ್ಯವಾ? ಎಂದು ಪ್ರಶ್ನಿಸಿದರು.

50 ಪ್ರತಿಶತಕ್ಕಿಂತ ಮೀಸಲಾತಿ ಹೆಚ್ವಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇದನ್ನು ಕೇಂದ್ರ ಸರ್ಕಾರ ಮಾತ್ರ ಮಾಡಲು ಸಾದ್ಯ 150 ಕೋಟಿ ವೆಚ್ಚ ಮಾಡಿ ಜಾತಿ ಸಮೀಕ್ಷೆ ಮಾಡಲಾಗಿದೆ. ಡಾ.ಕಾಂತರಾಜ್ ವರದಿ ಆದರಿಸಿ ಮೀಸಲಾತಿ ನೀಡಿ, ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಿ ಎಂಬುದು‌ ನಮ್ಮ‌ ಬೇಡಿಕೆಯಾಗಿದೆ ಎಂದರು...

Edited By : Manjunath H D
PublicNext

PublicNext

17/02/2021 05:48 pm

Cinque Terre

66.88 K

Cinque Terre

2

ಸಂಬಂಧಿತ ಸುದ್ದಿ