ನವದೆಹಲಿ: 'ಹಮ್ ದೋ, ಹಮಾರೆ ದೋ' ಎನ್ನುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೊದಲು ಮದುವೆಯಾಗಲಿ ಎಂದು ಕೇಂದ್ರ ಸಚಿವ ರಾಮದಾಸ್ ಅಠಾವಳೆ ಹೇಳಿದ್ದಾರೆ.
ಬಜೆಟ್ ಮೇಲಿನ ಭಾಷಣದ ವೇಳೆ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಎಂದಿನ ಶೈಲಿಯಲ್ಲಿ ಹರಿಹಾಯ್ದಿದ್ದರು. ಇದೇ ವಿಚಾರವಾಗಿ ಮಾತನಾಡಿದ ರಾಮದಾಸ್ ಅಠಾವಳೆ ಅವರು, "ಹಮ್ ದೋ, ಹಮಾರೆ ದೋ" ಘೋಷಣೆಯನ್ನು ಕುಟುಂಬ ಕಲ್ಯಾಣ ಯೋಜನೆಗಾಗಿ ಬಳಸಲಾಗುತ್ತಿತ್ತು. ರಾಹುಲ್ ಗಾಂಧಿ ಅವರು ಇದನ್ನು ಉತ್ತೇಜಿಸಲು ಬಯಸಿದರೆ ಮೊದಲು ಮದುವೆಯಾಗಬೇಕು. ಅವರು ದಲಿತ ಹುಡುಗಿಯನ್ನು ಮದುವೆಯಾಗಬೇಕು ಮತ್ತು ಜಾತಿತ್ವವನ್ನು ತೊಡೆದುಹಾಕುವ ಮಹಾತ್ಮಾ ಗಾಂಧೀಜಿ ಅವರ ಕನಸನ್ನು ಈಡೇರಿಸಬೇಕು ಎಂದು ಒತ್ತಾಯಿಸಿದ್ದಾರೆ.
PublicNext
16/02/2021 08:50 pm