ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾನು ಮನಸ್ಸು ಮಾಡಿದ್ರೆ, ಇನ್ನು ಟಾಪ್ ಪೈವ್ ಕೈ ನಾಯಕರನ್ನ ಬಿಜೆಪಿಗೆ ತರಬಲ್ಲೆ: ರಮೇಶ ಜಾರಕಿಹೊಳೆ

ನಾನು ಮನಸ್ಸು ಮಾಡಿದರೆ 24 ಗಂಟೆಯಲ್ಲಿ ಟಾಪ್ ಫೈವ್ ಕಾಂಗ್ರೆಸ್ ಶಾಸಕರನ್ನು ಇವಾಗಲೇ ಬಿಜೆಪಿಗೆ ಬರುತ್ತಾರೆ ಅವರು ಹೆಸರು ಹೇಳಿದರೆ ನೀವು ಕೂಡಾ ಗಾಬರಿ ಆಗುತ್ತಿರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

ಭಾನುವಾರ ನಗರದ ಸಿಪಿಎಡ್ ಮೈದಾನದಲ್ಲಿ ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಳದ ನೂತನ ಗ್ರಾಪಂಗೆ ಆಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಸದಸ್ಯರುಗಳಿಗೆ ಸತ್ಕಾರ ಸಮಾರಂಭದ ಉದ್ಘಾಟಿಸಿ ಮಾತನಾಡಿದ ಅವರು

ಮಾಜಿ ಸಿಎಮ್. ಸಿದ್ದರಾಮಯ್ಯ ಈಗಲೂ ನಮ್ಮ ನಾಯಕರೇ ಅವರೊಂದಿಗೆ ನಾನು ಈಗಲೂ ಉತ್ತಮ ಸಂಬಂದ ಹೊಂದಿದ್ದೇನೆ. ಆದ್ರೆ ಪಕ್ಷದ ವಿಷಯ ಅಂತಾ ಬಂದ್ರೆ ನಾನು ಯಾವಗಲೂ ಬಿಜೆಪಿ ಪಕ್ಷದವನು ಎಂದು ಹೇಳಿದರು. ಆದರೆ ಮರಳಿ ಎಂದು ಕಾಂಗ್ರೆಸ್ ಸೇರುವುದಿಲ್ಲ, ನಾನು ಇವಾಗಲೇ ಹೇಳಿದ್ರೆ ಸಾಕು ಕಾಂಗ್ರೆಸ್ ಪಕ್ಷದ ಐವರು ಪ್ರಮುಖ ನಾಯಕರು ರಾಜೀನಾಮೆ ನೀಡಿ ನಮ್ಮ ಬಿಜಿಪಿಯ ಪಕ್ಷಕ್ಕೆ ತುದಿಗಾಲಲ್ಲಿ ಇದ್ದಾರೆ ನಾನು ಮನಸ್ಸು ಮಾಡಿದ್ರೆ ಜಸ್ಟ್ ೨೪ ಗಂಟೆಗಳಲ್ಲಿ ಅವರನ್ನ ಬಿಜೆಪಿ ಗೆ ಕರೆದುತರುತ್ತೇನೆ ಎಂದು ಹೇಳಿದರು.

17 ಜನ ಶಾಸಕರು ಗಟ್ಟಿಯಾಗಿ,ಆನಂದದಿಂದ ಇದ್ದೇವೆ. ನಾವು ಎಲ್ಲಿಯೂ ಹೋಗುವುದಿಲ್ಲ. ಇದೆ ವೇಳೆ ಮಾತ್ನಾಡಿದ ಅವರು ಮುಂಬರುವ ಚುನಾವಣೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ 60 ಸಾವಿರ ಲೀಡನಿಂದ ಬಿಜೆಪಿ ಗೆಲವು ಸಾಧಿಸುತ್ತೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಗೆ ಟಾಂಗ್ ನೀಡಿದರು. ನಮ್ಮದು ಮಹಿಳೆಯರಿಗೆ ಪೂಜ್ಯನೀಯ ಸ್ಥಾನ ನೀಡುವ ಪಕ್ಷ, ನಾವು ರಾಜಕೀಯವಾಗಿ ಅಷ್ಟೇ ಮಾತ್ರ ವಿರೋಧ ಮಾಡುತ್ತವೆ. ಯಾರೆ ಆಗಲಿ ರಾಜಕೀಯದಲ್ಲಿ ಟೀಕೆಗಳು ವ್ಯಕ್ತಿಗತವಾಗಿರದೆ ರಾಜಕೀಯಕ್ಕೆ ಮಾತ್ರ ಸೀಮಿತವಾಗಿರಬೇಕು ಎಂದು ಪರೋಕ್ಷವಾಗಿ ಹೆಬ್ಬಾಳಕರ್ ಮೇಲೆ ಹರಿಹಾಯ್ದರು.

Edited By : Manjunath H D
PublicNext

PublicNext

14/02/2021 11:08 pm

Cinque Terre

72.35 K

Cinque Terre

5

ಸಂಬಂಧಿತ ಸುದ್ದಿ