ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯ ಹಾಗೂ ಮಾಜಿ ಕೇಂದ್ರ ಸಚಿವ ಎಸ್.ಎಂ.ಕೃಷ್ಣ ಮೊಮ್ಮಗ ಮತ್ತು ಕಾಫೀ ಡೇ ಮಾಲೀಕ ದಿ.ಸಿದ್ದಾರ್ಥ್ ಹೆಗ್ಡೆ ಪುತ್ರ ಅಮರ್ತ್ಯ ಹೆಗ್ಡೆ ಪ್ರೇಮಿಗಳ ದಿನದಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ವೈಟ್ ಫೀಲ್ಡ್ ಬಳಿಯ ಖಾಸಗಿ ಹೋಟೆಲಿನಲ್ಲಿ ಐಶ್ವರ್ಯ ಮತ್ತು ಅಮರ್ತ್ಯ ಸುಬ್ರಹ್ಮಣ್ಯ ಹೆಗ್ಡೆ ವಿವಾಹ ನೆರವೇರಿದೆ. ಬೆಳಗ್ಗೆ 9 ರಿಂದ 9-45ರ ನಡುವಿನ ಶುಭ ಮುಹೂರ್ತದಲ್ಲಿ ಮಾಂಗಲ್ಯ ಧಾರಣೆ ಆಗಿದೆ.
ಡಿ.ಕೆ ಶಿವಕುಮಾರ್ ಪುತ್ರಿಯ ಮದುವೆ ಸಮಾರಂಭದಲ್ಲಿ ಆಯ್ದ ಗಣ್ಯರು ಹಾಗೂ ಸಂಬಂಧಿಕರಿಗಷ್ಟೇ ಆಹ್ವಾನಿಸಲಾಗಿದೆ. ಅದ್ದೂರಿಯಾಗಿ ಮದುವೆ ನೇರವೇರಿದೆ. ಕನ್ಯಾದಾನದ ವೇಳೆ ಡಿಕೆ ಶಿವಕುಮಾರ್ ಕಣ್ಣೀರು ಇಟ್ಟಿದ್ದಾರೆ. ನಿನ್ನ ನಡೆದಿರುವ ಕಾರ್ಯಕ್ರಮದಲ್ಲಿ ‘ಅಪ್ಪಾ ಐ ಲವ್ ಯು’ ಹಾಡಿಗೆ ಮಗಳು ನೃತ್ಯ ಮಾಡುತ್ತಿದ್ದರೆ, ಇತ್ತ ತಂದೆ ಶಿವಕುಮಾರ್ ಮಗಳ ನೃತ್ಯ ನೋಡಿ ಆನಂದಭಾಷ್ಪ ಸುರಿಸುತ್ತಿದ್ದರು.
ಮಗಳ ಮದುವೆ ಕಾರ್ಯಕ್ರಮದ ಎಲ್ಲಾ ಸಿದ್ಧತೆಯನ್ನು ಸ್ವತಃ ಡಿಕೆ ಶಿವಕುಮಾರ್ ಮುಂದೆ ನಿಂತು ಮಾಡಿದ್ದಾರೆ ಮದುವೆಗೆ ಸಂಬಂಧಿಕರು ಮತ್ತು ಆತ್ಮೀಯ ಸ್ನೇಹಿತರು ಭಾಗಿಯಗಿದ್ದರು. ಫೇ 17 ರಂದು ನಡೆಯುವ ಆರತಕ್ಷತೆಯಲ್ಲಿ ಹಲವು ಗಣ್ಯಾತೀಗಣ್ಯರು ಮತ್ತು ಸೆಲೆಬ್ರಿಟಿಗಳು ಭಾಗಿಯಾಗಲಿದ್ದಾರೆ. ಐಶ್ವರ್ಯ ಪ್ರೇಮಿಗಳ ದಿನದಂದು ಅಮರ್ತ್ಯ ಹೆಗ್ಡೆ ಅವರನ್ನು ವರೆಸಿರುವುದು ವಿಶೇಷವಾಗಿದೆ.
PublicNext
14/02/2021 10:30 am