ಬೆಂಗಳೂರು : ರಾಜ್ಯದಲ್ಲಿ ಶುರುವಾಗಿರುವ ಮೀಸಲಾತಿ ಹೋರಾಟ ಸಿಎಂಗೆ ತಲೆನೋವಾಗಿ ಪರಿಣಮಿಸಿದೆ. ಒಂದು ಸಮುದಾಯದ ಬೇಡಿಕೆ ಈಡೇರಿಸಿದರೆ, ಇನ್ನೊಂದು ಸಮುದಾಯದ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇದೆ. ಹಾಗಾಗಿ ಸಿಎಂ ಟೆನ್ಷನ್ ನಲ್ಲಿದ್ದಾರೆ. ಸ್ವಾಮೀಜಿಗಳ ನೇತೃತ್ವದಲ್ಲಿ ಮೀಸಲಾತಿ ಹೋರಾಟ ಸರಿಯಲ್ಲ. ಸ್ವಾಮೀಜಿಗಳಿಗೆ ಹೋರಾಟದ ನೇತೃತ್ವ ನೀಡುವುದು ಒಳ್ಳೆಯದಲ್ಲ ಎಂದು ಬಿಜೆಪಿ ಎಂಎಲ್ ಸಿ ವಿಶ್ವನಾಥ್ ಹೇಳಿದ್ದಾರೆ.
ಇನ್ನೊದೆಡೆ ಕುರುಬರ ST ಹೋರಾಟಕ್ಕೆ RSS ಬೆಂಬಲ ಆರೋಪಕ್ಕೆ ಪ್ರತಿಕ್ರಿಯಿಸಿದ್ದಾರೆ. ಈ ದೇಶದಲ್ಲಿ RSS ಬ್ಯಾನ್ ಆಗಿದೆಯಾ.? ಬ್ಯಾನ್ ಆಗಿದ್ರೆ ಆಗ ಹೇಳಿ. ಒಂದು ವೇಳೆ ಹೋರಾಟಕ್ಕೆ ಬೆಂಬಲ ನೀಡಿದ್ರೆ ಅದರಲ್ಲಿ ತಪ್ಪೇನಿಲ್ಲ. RSS ಬೆಂಬಲ ನೀಡಿದೆ ಎನ್ನುವುದರಲ್ಲಿ ಸಾಕ್ಷಿಯೇನಿದೆ.? ಸಿದ್ದರಾಮಯ್ಯ ಹೇಳಿಕೆಯಲ್ಲಿ ಹುರುಳಿಲ್ಲರೀ ಎಂದು ವಿಶ್ವನಾಥ್, ಸಿದ್ದರಾಮಯ್ಯಗೆ ಟಾಂಗ್ ನೀಡಿದ್ದಾರೆ.
PublicNext
13/02/2021 10:32 pm