ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಗಾ ದೇಶದ 'ಬೊಗಳೆ ದಾಸ': ವಿತ್ತ ಸಚಿವೆ

ನವದೆಹಲಿ: ದೇಶದ ಸಾಂವಿಧಾನಿಕ ಸಂಸ್ಥೆಗಳ ಕಾರ್ಯವೈಖರಿಯನ್ನು ನಿರಂತರವಾಗಿ ಟೀಕಿಸುವ, ಹಲವು ವಿಷಯಗಳ ಕುರಿತು ಇಲ್ಲಸಲ್ಲದ ಸುಳ್ಳು ಕಥೆ ಸೃಷ್ಟಿಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒಬ್ಬ ಬೊಗಳೆ ದಾಸ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆರೋಪಿಸಿದ್ದಾರೆ.

ಲೋಕಸಭೆಯಲ್ಲಿ ಬಜೆಟ್-2021 ಮೇಲಿನ ಚರ್ಚೆಗೆ ಉತ್ತರಿಸುವ ವೇಳೆ ಸಚಿವೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದಿನಕ್ಕೊಂದು ಸುಳ್ಳು ಸಂಗತಿಗಳನ್ನು ಸೃಷ್ಟಿಸುತ್ತಾರೆ, ಸರ್ಕಾರದ ಮೇಲೆ ಮಾಡುವ ಆರೋಪಗಳಿಗೆ ಪ್ರತಿಕ್ರಿಯೆ ಕೇಳುವ ತಾಳ್ಮೆಯಿಲ್ಲ ಎಂದು ಟೀಕಿಸಿದರು.

ಪ್ರಜಾಸತ್ತಾತ್ಮಕವಾಗಿ ಚುನಾಯಿತಗೊಂಡ ಸಂಸದೀಯ ವ್ಯವಸ್ಥೆ ಮೇಲೆ ಕಾಂಗ್ರೆಸ್ ನಾಯಕರಿಗೆ ವಿಶ್ವಾಸ, ನಂಬಿಕೆಯಿಲ್ಲ,ರಾಹುಲ್ ಭಾರತಕ್ಕೆ ಒಂಥರಾ ಬೊಗಳೆ ದಾಸರಾಗಿಬಿಟ್ಟಿದ್ದಾರೆ.

ಸದನದಲ್ಲಿ ಸೂಕ್ತ ವಿಷಯಳ ಬಗ್ಗೆ ಪ್ರಸ್ತಾಪವೇ ಮಾಡಲಿಲ್ಲ. ಬಜೆಟ್ ಬಗ್ಗೆ ಮಾತನಾಡದೇ ಇರುವುದು ಬೇಸರ ತಂದಿದೆ ಎಂದರು.

ಯುಪಿಎ ಆಳ್ವಿಕೆ ಸಮಯದಲ್ಲಿ ಕೃಷಿ ಕಾನೂನನ್ನು ಬೆಂಬಲಿಸಿದ್ದವರು ಇಂದು ಯು-ಟರ್ನ್ ಏಕೆ ತೆಗೆದುಕೊಂಡಿದ್ದಾರೆ ಎಂದು ಕೇಳಿದರೆ ಕಾಂಗ್ರೆಸ್ ಬಳಿ ಉತ್ತರವಿಲ್ಲ. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ರಾಜಸ್ತಾನ, ಮಧ್ಯ ಪ್ರದೇಶ, ಛತ್ತೀಸ್ ಗಢ ರಾಜ್ಯಗಳಲ್ಲಿ ಕಾಂಗ್ರೆಸ್ ಸರ್ಕಾರಗಳು ರೈತರ ಕೃಷಿಸಾಲ ಮನ್ನಾ ಮಾಡಲಿಲ್ಲ ಏಕೆ ಎಂದು ರಾಹುಲ್ ಗಾಂಧಿ ಸದನದಲ್ಲಿ ಉತ್ತರ ನೀಡಲಿಲ್ಲ ಎಂದು ಆಕ್ಷೇಪಿಸಿದರು.

ಕಾಂಗ್ರೆಸ್ ಅಧಿಕಾರದಲ್ಲಿರುವ ಪಂಜಾಬ್ ರಾಜ್ಯದ ರೈತರ ಸಮಸ್ಯೆಗಳ ಬಗ್ಗೆ ಕೂಡ ರಾಹುಲ್ ಗಾಂಧಿಯವರು ಮಾತನಾಡಲಿಲ್ಲ, ಕೃಷಿ ಕಾಯ್ದೆಯಲ್ಲಿ ರೈತರಿಗೆ ಏನು ಅನನುಕೂಲಗಳಿವೆ ಎಂಬುದನ್ನು ಕೂಡ ಹೇಳುತ್ತಿಲ್ಲ ಎಂದು ನಿರ್ಮಲಾ ಸೀತಾರಾಮನ್ ಪ್ರಶ್ನಿಸಿದರು.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಪ್ರತಿಪಾದಿಸಿದ್ದ ಎಪಿಎಂಸಿ ಸುಧಾರಣೆಗಳ ಬಗ್ಗೆ ಮಾತನಾಡಿಲ್ಲ, ಕಾಂಗ್ರೆಸ್ ಪಕ್ಷಕ್ಕೆ ನಾವಿಬ್ಬರು, ಹಮ್ ದೋ, ಹಮಾರೇ ದೋ ಎಂಬುದರ ಬಗ್ಗೆ ಮಾತ್ರ ಚಿಂತೆಯಾಗಿದೆ. ನಮ್ಮ ಸರ್ಕಾರವನ್ನು ಟೀಕಿಸುವ ಮೊದಲು ರೈತರಿಂದ ಅಲ್ಪಮೊತ್ತಕ್ಕೆ ಖರೀದಿಸಿದ ಜಮೀನನ್ನು ಮೊದಲು ಹಿಂತಿರುಗಿಸಿ ಎಂದು ನಿರ್ಮಲಾ ಸವಾಲು ಹಾಕಿದರು.ಟೀಕಿಸುವ ಭರದಲ್ಲಿ ದೇಶಕ್ಕೆ ರಾಹುಲ್ ಗಾಂಧಿಯವರು ಕೆಟ್ಟ ಹೆಸರು ತರುತ್ತಿದ್ದಾರೆ ಎಂದು ಆರೋಪಿಸಿದರು.

Edited By : Nirmala Aralikatti
PublicNext

PublicNext

13/02/2021 09:59 pm

Cinque Terre

110.37 K

Cinque Terre

43

ಸಂಬಂಧಿತ ಸುದ್ದಿ