ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಹಾಗೂ ಸಿಎಂ ಯಡಿಯೂರಪ್ಪ ವಿರುದ್ಧ ಮಾತನಾಡಿದ ಶಾಸಕ ಬಸವರಾಜ್ ಪಾಟೀಲ್ ಯತ್ನಾಳ್ ವಿರುದ್ಧ ಕೇಂದ್ರ ಬಿಜೆಪಿ ನಾಯಕರಿಂದ ಶೋಕಾಸ್ ನೋಟಿಸ್ ಜಾರಿಯಾಗಿದೆ. ಈ ನೋಟಿಸ್ ಗೆ ಈಗ ಯತ್ನಾಳ್ ಉತ್ತರಿಸಬೇಕಾಗಿದೆ.
ಈಗಾಗಲೇ ದಿನೇ ದಿನೇ ಪ್ರಬಲವಾಗಿ ಬೆಳೆಯುತ್ತಿರುವ ಪಂಚಮಸಾಲಿ ಮೀಸಲಾತಿ ಬೇಡಿಕೆ ಹೋರಾಟ ಹಾಗೂ ಸ್ವಾಮೀಜಿಗಳ ಪಾದಯಾತ್ರೆಗೆ ಯತ್ನಾಳ್ ಅವರು ಬಹಿರಂಗವಾಗಿ ಬೆಂಬಲಿಸಿದ್ದಾರೆ. ಜೊತೆಗೆ ಈ ವಿಚಾರದಲ್ಲಿ ಆಡಳಿತ ಪಕ್ಷದವರಾಗಿದ್ದುಕೊಂಡು ಸರ್ಕಾರದ ನಡೆಯನ್ನು ಟೀಕಿಸಿದ್ದಾರೆ ಈ ಕಾರಣಕ್ಕಾಗಿ ನೋಟಿ್ ಬಂದಿದೆ ಎನ್ನಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕ ಬಸವರಾಜ್ ಪಾಟೀಲ್ ಯತ್ನಾಳ್ ನಾನು ಮೀಸಲಾತಿ ಹೋರಾಟಕ್ಕೆ ಬೆಂಬಲಿಸಿ ಮಾತನಾಡಿದ್ದು ತಪ್ಪಾ ಎಂದು ಪ್ರಶ್ನಿಸಿದ್ದಾರೆ. ಶಿಸ್ತು ಉಲ್ಲಂಘನೆಗಾಗಿ ಬಂದಿರುವ ನೋಟಿಸ್ ಬಿಜೆಪಿ ವಲಯದಲ್ಲಿ ಯತ್ನಾಳ್ ಭಿನ್ನಮತಕ್ಕೆ ಮತ್ತಷ್ಟು ಕಾರಣವಾಗಬಹುದು ಎನ್ನಲಾಗಿದೆ.
PublicNext
13/02/2021 08:33 am