ಕೋಲ್ಕತ್ತಾ: ಜೈ ಶ್ರೀರಾಮ್ ಘೋಷಣೆ ಭಾರತದಲ್ಲಿ ಕೂಗದಿದ್ದರೆ, ಪಾಕಿಸ್ತಾನದಲ್ಲಿ ಕೂಗುತ್ತಾರೆಯೇ? ಈ ಘೋಷಣೆ ಕೂಗಿದರೆ ಮಮತಾ ಬ್ಯಾನರ್ಜಿ ಅವರಿಗೆ ಸಿಟ್ಟು ಬರುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುಡುಗಿದ್ದಾರೆ.
ಉತ್ತರ ಬಂಗಾಳದ ಕೂಚ್ಬೆಹಾರ್ನಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ''ಪಶ್ಚಿಮ ಬಂಗಾಳ ಚುನಾವಣೆಯು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ‘ವಿನಾಶದ ಮಾದರಿ’ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ‘ಅಭಿವೃದ್ಧಿ ಮಾದರಿ’ ನಡುವಿನ ಹೋರಾಟವಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಯಸುವ ದೊಡ್ಡ ಬಹುಮಾನ ಬಂಗಾಳ ಆಗಿದೆ. ಈ ಬಾರಿ 294 ಸೀಟಗಳಲ್ಲಿ 200 ಸೀಟುಗಳನ್ನು ಗೆಲ್ಲುವ ಗುರಿಯನ್ನು ಬಿಜೆಪಿ ಹೊಂದಿದೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.
PublicNext
11/02/2021 06:57 pm