ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಂಧನ ಬೆಲೆ ಏರಿಕೆ: ಕತ್ತೆ ಮೇಲೆ ಸಿಲಿಂಡರ್​ ಇಟ್ಟು ವಾಟಾಳ್ ಮೆರವಣಿಗೆ

ಬೆಂಗಳೂರು: ಪೆಟ್ರೋಲ್​, ಡೀಸೆಲ್​, ಗ್ಯಾಸ್​ ದರ ಏರಿಕೆ ಖಂಡಿಸಿ ಕನ್ನಡ ಪರ ಹೋರಾಟಗಾರ ವಾಟಾಳ್​​ ನಾಗರಾಜ್​ ಪ್ರತಿಭಟನೆ ನಡೆಸಿದ್ದಾರೆ. ಕತ್ತೆ ಮೇಲೆ ಗ್ಯಾಸ್​ ಸಿಲಿಂಡರ್ ಇಟ್ಟುಕೊಂಡು ಇಂದು ಮೆಜೆಸ್ಟಿಕ್​ನ ಕೆಂಪೇಗೌಡ ಬಿಎಂಟಿಸಿ ಬಸ್​ ನಿಲ್ದಾಣದ ಸುತ್ತ ಮೆರವಣಿಗೆ ಮಾಡುವ ಮೂಲಕ ಇಂಧನ ಬೆಲೆ ಏರಿಕೆ ವಿರುದ್ಧ ಅಸಮಾಧಾನ ಹೊರ ಹಾಕಿದರು.

ಈ ವೇಳೆ ಮಾತನಾಡಿದ ಅವರು, ಇದು ಕಣ್ಣೀರಿನ ಕಥೆ. ಇಡೀ ದೇಶದಲ್ಲಿ ಇಂಧನ ಬೆಲೆ ಇಳಿಕೆ ಕಂಡಿದ್ದನ್ನು ನೋಡಿಲ್ಲ, ಬರಿ ಏರಿಕೆಯಾಗುತ್ತಲೇ ಇದೆ. ಬೆಲೆ ಏರಿಕೆ ವಿಚಾರದ ಬಗ್ಗೆ ಪಾರ್ಲಿಮೆಂಟ್​ನಲ್ಲಿ ಚರ್ಚೆ ಆಗುತ್ತಿಲ್ಲ. ಕೇವಲ ಮೂರು ದಿನದಲ್ಲಿ ಡೀಸೆಲ್​ ಹಾಗೂ ಪೆಟ್ರೋಲ್ ಬೆಲೆ​ ಬಾರಿ ಏರಿಕೆ ಕಂಡಿದೆ. ಇನ್ನು ಕೆಲವೇ ದಿನದಲ್ಲಿ 100 ರೂಪಾಯಿ ತಲುಪಲಿದೆ ಎಂದು ಗುಡುಗಿದರು.

Edited By : Vijay Kumar
PublicNext

PublicNext

11/02/2021 04:02 pm

Cinque Terre

69.15 K

Cinque Terre

14

ಸಂಬಂಧಿತ ಸುದ್ದಿ