ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ರಂಗೇರುತ್ತಿದ್ದು, ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಭರ್ಜರಿ ಪ್ರಚಾರ ನಡೆಸಿದ್ದು, ಪರಸ್ಪರ ವಾಗ್ದಾಳಿ ನಡೆಸಿದ್ದಾರೆ.
ಇತ್ತ ಬಿಜೆಪಿಗೆ ಸೇರಲು ಪಕ್ಷವನ್ನು ತೊರೆದ ಟಿಎಂಸಿ ನಾಯಕರನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಅಪಹಾಸ್ಯ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ದೀದಿ, "ಕೆಲವು ತುಂಟತನದ ಹಸುಗಳು ಬಿಜೆಪಿಗೆ ಸೇರಲು ಪಕ್ಷವನ್ನು ತೊರೆದವು. ಅವರು ಈಗ ಸಾಕಷ್ಟು ಶಬ್ದ ಮಾಡುತ್ತಿದ್ದಾರೆ. ಹಂಬಾ ಹಂಬಾ ರಂಬಾ ರಂಬಾ ಕಂಬಾ ಕಂಬಾ ಡುಂಬಾ ಡುಂಬಾ ಬುಂಬಾ ಬುಂಬಾ" ಎಂದು ಕುಟುಕಿದ್ದಾರೆ.
PublicNext
11/02/2021 02:41 pm