ತುಮಕೂರು: ಪಂಚಮಸಾಲಿ 2ಎ ಮೀಸಲಾತಿಗಾಗಿ ನಡೆಸುತ್ತಿರುವ ಪಾದಯಾತ್ರೆ ತುಮಕೂರು ಜಿಲ್ಲೆಯ ಸೀಬಿಗೆ ತಲುಪಿದ್ದು ಇದೀಗ ಕೂಡಲಸಂಗಮ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದಾರೆ.
ಮುಂದಿನ ಪಂಚಮಸಾಲಿ ಸಮಾವೇಶದ ಕುರಿತಾಗಿ ಇಂದು ಸಂಜೆ ಸಭೆ ಸೇರಲಿದ್ದೇವೆ ನೂರಾರು ಜನಪ್ರತಿನಿಧಿಗಳು ರಾಜಕಾರಣಿಗಳು ಸಭೆಗೆ ಹಾಜರಾಗುತ್ತಾರೆ ಸಭೆಯಲ್ಲಿ ಮುಂದಿನ ಹೋರಾಟದ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದು ತಿಳಿಸಿದರು.
ಸರ್ಕಾರ ಶಾಶ್ವತ ಹಿಂದುಳಿದ ಆಯೋಗದ ವರದಿಯನ್ನ ಶೀಘ್ರವಾಗಿ ತರಿಸಿಕೊಳ್ಳಬೇಕು ನಾವು ಬೆಂಗಳೂರು ಮುಟ್ಟುವ ವೇಳೆಗೆ ಅಂದರೆ ಫೆ.17-18 ವೇಳೆಗೆ ವರದಿ ತರಿಸಿಕೊಳ್ಳಬೇಕು ವಿಳಂಬವಾದರೆ ಅನಿವಾರ್ಯವಾಗಿ ವಿಧಾನಸೌಧ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
PublicNext
10/02/2021 03:47 pm