ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೆಸ್ಕಾಂ ಅಧಿಕಾರಿಗಳ ಚಳಿ ಬಿಡಿಸಿದ ಈಶ್ವರಪ್ಪ: ಕಳಪೆ ಕಾಮಗಾರಿಗೆ ಗರಂ

ಶಿವಮೊಗ್ಗ: ನಿರಂತರ ಜ್ಯೋತಿ ವಿದ್ಯುತ್ ಕಾಮಗಾರಿಯಲ್ಲಿ ನಡೆದಿದೆ ಎನ್ನಲಾದ ಕಳಪೆ ಕಾಮಗಾರಿ ಕುರಿತಂತೆ ಮೆಸ್ಕಾಂ ಅಧಿಕಾರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತರಾಟೆಗೆ ತೆಗೆದುಕೊಂಡಿದ್ದಾರೆ.

ಜಿಲ್ಲಾಧಿಕಾರಿಗಳ ಕಛೇರಿ ಸಂಭಾಗಣದಲ್ಲಿ ನಡೆದ ಸಭೆಗೆ ಬಂದ ಸಚಿವ ಈಶ್ವರಪ್ಪ ಕಾಮಗಾರಿಯಲ್ಲಿ ಅಳವಡಿಸಿರುವ ಕಳಪೆ ವಸ್ತುಗಳನ್ನು ಪ್ರದರ್ಶಿಸಿದರು. ಯೋಜನೆಯಡಿ ಅಳವಡಿಸಿರುವ ಕಳಪೆ ವಸ್ತುಗಳನ್ನು ಅಧಿಕಾರಿಗಳ ಎದುರು ಪ್ರದರ್ಶಿಸಿ ಇದಕ್ಕೆ ಯಾರು ಹೊಣೆ? ಎಂದು ಅಧಿಕಾರಿಗಳ ಕ್ರಮಕ್ಕೆ ಗರಂ ಆದರು. ನೀವು ಮಾಡಿದ ಕಳಪೆ ಕೆಲಸವನ್ನೆಲ್ಲ ನಿಮ್ಮ ಮುಂದೆ ಸಾಕ್ಷಿ ಸಮೇತ ಇಟ್ಟಿದ್ದೇನೆ. ಟೆಂಡರ್ ಒಪ್ಪಂದದಲ್ಲಿ ಉಲ್ಲೇಖಿಸಿದಂತೆ ಕಾಮಗಾರಿ ನಡೆದಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಿ 15 ದಿನಗಳ ಒಳಗಾಗಿ ವರದಿ ನೀಡಬೇಕು ಎಂದು ಈಶ್ವರಪ್ಪ ಅಧಿಕಾರಿಗಳಿಗೆ ತಾಕೀತು ಮಾಡಿದರು.

Edited By : Nagaraj Tulugeri
PublicNext

PublicNext

10/02/2021 03:03 pm

Cinque Terre

49.4 K

Cinque Terre

2

ಸಂಬಂಧಿತ ಸುದ್ದಿ