ಬಳ್ಳಾರಿ: ರಾಜ್ಯ ಸರ್ಕಾರವು ವಿಜಯನಗರವನ್ನು ಅಧಿಕೃತವಾಗಿ ನೂತನ ಜಿಲ್ಲೆಯಾಗಿ ಘೋಷಿಸಿದ ಬೆನ್ನಲ್ಲೇ ಸಚಿವ ಆನಂದ್ ಸಿಂಗ್ ಹೆಲಿಕಾಪ್ಟರ್ ಮೂಲಕ ಹಂಪಿಗೆ ಬಂದಿಳಿದರು. ಈ ವೇಳೆ ಜಿಲ್ಲೆಯ ಮಣ್ಣಿಗೆ ಮಂಡಿಯೂರಿ ನಮಿಸಿದ ಅವರು, ರಸ್ತೆಯುದ್ದಕ್ಕೂ ವಿಜಯ ನಗರದ ಹೆಸರಿರುವ ಬಾವುಟವನ್ನು ಹಾರಿಸುತ್ತ ಮೆರೆವಣೆಗೆ ನಡೆಸಿದರು.
ಬಳಿಕ ಮಾತನಾಡಿದ ಅವರು, ವಿಜಯನಗರ ಜಿಲ್ಲೆಗೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕಂದಾಯ ಸಚಿವ ಆರ್.ಅಶೋಕ್ ಸೇರಿದಂತೆ ಎಲ್ಲರಿಗೂ ಅಭಿನಂದನೆಗಳು ಎಂದು ಹೇಳಿದರು.
ವಿಜಯಪುರ ಜಿಲ್ಲೆ ರಚನೆ ವಿಚಾರದಲ್ಲಿ ನನ್ನ ಆಪ್ತ ಸಹಾಯಕ ಮುನಿರಾಜು ಶ್ರಮ ಬಹಳ ಇದೆ. ಪಶ್ಚಿಮ ತಾಲೂಕುಗಳ ಜನರ ಬೇಡಿಕೆ ಈಡೇರಿದೆ. ಹೋರಾಟಗಾರರಿಗೆ ಅಭಿನಂದನೆ. ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳು. ಜಿಲ್ಲೆ ಅಭಿವೃದ್ಧಿ ಆಗುತ್ತದೆ. ಜಿಲ್ಲೆ ವಿಭಜನೆ ಆಗೋದ್ರಿಂದ ಯಾರಿಗೂ ತೊಂದರೆಯಾಗುವುದಿಲ್ಲ ಎಂದು ತಿಳಿಸಿದರು.
ಜಿಲ್ಲೆ ವಿಭಜನೆಗೆ ವಿರೋಧ ಮಾಡಿದವರು ನಮ್ಮ ಅಣ್ಣ ತಮ್ಮಂದಿರು. ಗಡಿ ವಿಚಾರಕ್ಕೆ ಬಂದ್ರೆ ನಾವೆಲ್ಲಾ ಒಂದೇ, ಬಳ್ಳಾರಿಗೆ ಬಂದು ಬೇರೆಯವರು ಜಿಲ್ಲೆ ಕೊಡಿ ಅಂದ್ರೆ ಬಿಡ್ತೀವಾ ಹೇಳಿ? ಈ ಭಾಗದ ಜನರ ಅಭಿವೃದ್ಧಿ ನಮಗೆ ಮುಖ್ಯ ಎಂದರು.
PublicNext
08/02/2021 09:48 pm