ಮುಂಬೈ: ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಟೀಕೆ ಮಾಡಿದ್ದಕ್ಕೆ ಬಿಜೆಪಿ ನಾಯಕರೊಬ್ಬರ ಮುಖಕ್ಕೆ ಶಿವಸೇನೆಯ ಕಾರ್ಯಕರ್ತರು ಮಸಿ ಬಳಿದು ಆಕ್ರೋಶ ಹೊರಹಾಕಿದ್ದಾರೆ.
ಬಿಜೆಪಿ ನಾಯಕ ಶಿರೀಶ್ ಕಟೇಕರ್ ಅವರಿಗೆ ಶಿವಸೇನೆ ಕಾರ್ಯಕರ್ತರು ಮಸಿ ಬಳಿದಿದ್ದಾರೆ. ಸೋಲಾಪುರದಲ್ಲಿ ನಡೆದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿರುವ ಶಿವಸೇನಾ ಕಾರ್ಯಕರ್ತರು, ''ತಮ್ಮ ರಾಜ್ಯದ ಮುಖ್ಯಮಂತ್ರಿ ವಿರುದ್ಧ ಅವಹೇಳನಕಾರಿ ಪದ ಬಳಕೆ ಮಾಡಿರುವ ಕಾರಣ ಕಟೇಕರ್ ಮುಖಕ್ಕೆ ಮಸಿ ಬಳಿದಿದ್ದೇವೆ'' ಎಂದು ಹೇಳಿದ್ದಾರೆ.
''ನಮ್ಮ ನಾಯಕರಾದ ಉದ್ಧವ್ ಜೀ ವಿರುದ್ಧ ಕಟೇಕರ್ ಅವಹೇಳನಕಾರಿ ಪದ ಬಳಕೆ ಮಾಡಿದ್ದಾರೆ. ಹೀಗಾಗಿ ಸೇನಾ ಕಾರ್ಯಕರ್ತರಾದ ನಾವು ಕಟೇಕರ್‍ಗೆ ಮಸಿ ಬಳಿದು ಬಳೆ ಹಾರಹಾಕಿ ಸೀರೆ ಹೊದಿಸಿದ್ದೇವೆ. ನಮ್ಮ ನಾಯಕರ ಬಗ್ಗೆ ಈ ರೀತಿ ನಡೆದುಕೊಂಡರೆ ನಾವು ಯಾವುದೇ ರೀತಿಯ ಕಾರ್ಯಕ್ಕೂ ಸಿದ್ಧರಿದ್ದೇವೆ. ನಾವು ದಾಳಿ ಮಾಡಿ ಜೈಲಿಗೆ ಹೋಗಲು ರೆಡಿ'' ಎಂದು ಸೇನಾ ಕಾರ್ಯಕರ್ತ ಪುರುಷೋತ್ತಮ್ ಬರ್ಡೆ ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ.
PublicNext
08/02/2021 08:39 pm