ದಾವಣಗೆರೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಪುತ್ರಿ ಮತ್ತು ಪುತ್ರ ರಾಜಕೀಯಕ್ಕೆ ಬರುವುದು ಬಹುತೇಕ ಪಕ್ಕನಾ...? ಯಾಕೆಂದರೆ ಭವಿಷ್ಯದಲ್ಲಿ ಮಕ್ಕಳು ರಾಜಕೀಯಕ್ಕೆ ಬರ್ತಾರೆ ಎಂಬ ಮಾತನ್ನು ಸತೀಶ್ ಜಾರಕಿಹೊಳಿ ಹೇಳಿದ್ದರೆ, ಅವರ ಪುತ್ರಿ ಪ್ರಿಯಾಂಕಾ "ತಂದೆ ಹೇಳಿದಂತೆ ನಡೆಯುತ್ತೇವೆ'' ಎಂದಿದ್ದಾರೆ. ಇದು ಇದಕ್ಕೆ ಮತ್ತಷ್ಟು ಪುಷ್ಠಿ ತಂದಿದೆ.
ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ದಾವಣಗೆರೆಯ ರಾಜನಹಳ್ಳಿಯ ವಾಲ್ಮೀಕಿ ಮಠದಲ್ಲಿ ಮಾತನಾಡಿದ್ದು, ಚುನಾವಣೆಗೆ ಸ್ಪರ್ಧಿಸುವ ಕುರಿತ ಗುಟ್ಟು ಬಿಟ್ಟುಕೊಡಲಿಲ್ಲ.
ತಂದೆ ಹೇಳಿದರೆ ರಾಜಕೀಯಕ್ಕೆ ಬರುತ್ತೇನೆ. ನಾಲ್ಕೈದು ತಿಂಗಳಿನಿಂದ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದೇನೆ. ತಂದೆ ಈಗ ಇವುಗಳನ್ನಷ್ಟೆ ಮಾಡಿಕೊಂಡು ಹೋಗುವಂತೆ ಹೇಳಿದ್ದಾರೆ. ಹೀಗಾಗಿ, ಜನಪರ ಕಾರ್ಯಗಳನ್ನು ಮಾಡುತ್ತಿದ್ದೇವೆ. ಮುಂದೆ ತಂದೆ ಹೇಳಿದರೆ ರಾಜಕೀಯಕ್ಕೆ ಬರುತ್ತೇವೆ. ನನ್ನದೂ ಓದು ಮುಗಿದಿದೆ. ಈಗ ಆರಾಮಾಗಿದ್ದೇನೆ. ತಂದೆಯ ಬೆಂಬಲಕ್ಕೆ ನಿಲ್ಲುತ್ತೇವೆ. ನಮ್ಮ ಕೈಯಲ್ಲಾದಷ್ಟು ಸಹಕಾರ ನೀಡುತ್ತೇವೆ ಎಂದು ತಿಳಿಸಿದರು.
PublicNext
08/02/2021 07:38 pm