ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಭಾರತ ರತ್ನ'ರ ವಿರುದ್ಧ ತನಿಖೆಗೆ ಠಾಕ್ರೆ ಸರ್ಕಾರ ಆದೇಶ- ವ್ಯಾಪಕ ಟೀಕೆ

ಮುಂಬೈ: ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಭಾರತ ಸೆಲೆಬ್ರಿಟಿಗಳ ಟ್ವೀಟ್‌ಗಳ ಬಗ್ಗೆ ತನಿಖೆ ನಡೆಸಲು ಮಹಾರಾಷ್ಟ್ರ ಸರ್ಕಾರ ಆದೇಶಿಸಿದೆ.

ವಿದೇಶಿ ಸೆಲೆಬ್ರಿಟಿಗಳ ಟ್ವೀಟ್​ಗೆ ಸಂಬಂಧಿಸಿದ ಯಾರೆಲ್ಲಾ #IndiaTogether #IndiaAgainstPropaganda ಅಭಿಯಾನದಡಿ ಟ್ವೀಟ್ ಮಾಡಿದ್ದರೋ, ಅವರ ವಿರುದ್ಧ ತನಿಖೆ ಮಾಡುವಂತೆ ಮಹಾರಾಷ್ಟ್ರ ಸರ್ಕಾರದ ಗೃಹ ಸಚಿವ ಅನಿಲ್ ದೇಶ್​ಮುಖ್ ತನಿಖೆಗೆ ಆದೇಶ ನೀಡಿದ್ದಾರೆ ಎಂದು ವರದಿಯಾಗಿದೆ.

ಹೌದು. ರೈತರ ಪ್ರತಿಭಟನೆಯನ್ನ ಬೆಂಬಲಿಸಿ ಪಾಪ್ ಸಿಂಗರ್ ರಿಹಾನಾ, ಪರಿಸರ ಹೋರಾಟಗಾರ್ತಿ ರಿಹಾನಾ ಸೇರಿದಂತೆ ಹಲವರು ವಿದೇಶಿ ಸೆಲೆಬ್ರಿಟಿಗಳು ಟ್ವೀಟ್ ಮಾಡಿದ್ದರು. ಇದಕ್ಕೆ ಕ್ರಿಕೆಟ್‌ ದಿಗ್ಗಜ ಸಚಿನ್ ತೆಂಡೂಲ್ಕರ್, ಖ್ಯಾತ ಗಾಯಕಿ ಲತಾ ಮಂಗೇಶ್ಕರ್, ಬಾಲಿವುಡ್‌ ನಟ ಅಕ್ಷಯ್ ಕುಮಾರ್, ನಟಿ ಕಂಗನಾ ರಣಾವತ್, ಕ್ರಿಕೆಟರ್ ಶಿಖರ್ ಧವನ್ ಸೇರಿದಂತೆ ಹಲವರು ಟ್ವೀಟ್ ಮೂಲಕ ತಿರುಗೇಟು ನೀಡಿದ್ದರು. ಹೀಗಾಗಿ ಇವರೆಲ್ಲರನ್ನೂ ಮಹಾರಾಷ್ಟ್ರ ಸರ್ಕಾರದ ಅಧಿಕಾರಿಗಳು ತನಿಖೆ ನಡೆಸುವ ಸಾಧ್ಯತೆ ಇದೆ.

ಇದಕ್ಕೆ ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್, ಬಿಜೆಪಿ ಮುಖಂಡರು ಸೇರಿದಂತೆ ಅನೇಕರು ಟೀಕೆ ವ್ಯಕ್ತಪಡಿಸಿದ್ದಾರೆ. ''ಇದು ಅಸಹ್ಯಕರ ಮತ್ತು ಹೆಚ್ಚು ಶೋಚನೀಯ ನಿರ್ಧಾರ. ನಿಮ್ಮ ಮರಾಠಿ ಹೆಮ್ಮೆ ಈಗ ಎಲ್ಲಿದೆ? ನಿಮ್ಮ ಮಹಾರಾಷ್ಟ್ರ ಧರ್ಮ ಎಲ್ಲಿದೆ? ನಮ್ಮ ರಾಷ್ಟ್ರಕ್ಕಾಗಿ ಯಾವಾಗಲೂ ಒಂದೇ ಧ್ವನಿಯಲ್ಲಿ ಸದೃಢವಾಗಿ ನಿಲ್ಲುವ ಭಾರತ ರತ್ನರ ವಿರುದ್ಧ ತನಿಖೆ ನಡೆಸಲು ಆದೇಶಿಸುವ ಇಂತಹ ‘ರತ್ನ’ಗಳನ್ನು ಇಡೀ ರಾಷ್ಟ್ರದಲ್ಲಿ ನಾವು ಎಂದಿಗೂ ಕಾಣುವುದಿಲ್ಲ'' ಎಂದು ಫಡ್ನವೀಸ್ ಅವರು ಠಾಕ್ರೆ ಸರ್ಕಾರದ ವಿರುದ್ಧ ಗುಡುಗಿದ್ದಾರೆ.

Edited By : Vijay Kumar
PublicNext

PublicNext

08/02/2021 04:58 pm

Cinque Terre

75.88 K

Cinque Terre

27

ಸಂಬಂಧಿತ ಸುದ್ದಿ