ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸ್ಥಳೀಯರಿಗೆ ಉದ್ಯೋಗದಲ್ಲಿ ಪ್ರಾಶಸ್ತ್ಯ ನೀಡಿ; ಶಾಸಕ ಡಾ.ಭರತ್ ಶೆಟ್ಟಿ

ಬೆಂಗಳೂರು: ಸ್ಥಳೀಯವಾಗಿರುವ ಕೈಗಾರಿಕೆ, ಕಂಪನಿಗಳಲ್ಲಿ ಸ್ಥಳೀಯ ಕನ್ನಡಿಗರಿಗೆ ಶೇಕಡವಾರು ಉದ್ಯೋಗ ಕಡ್ಡಾಯವಾಗಿ ನೀಡುವಂತಾಗಲು ಸರೋಜಿನಿ ಮಹಿಷಿ ವರದಿಯನ್ನು ಸಮರ್ಪಕವಾಗಿ ಅನುಷ್ಠಾನಿಸಲು ಸರಕಾರ ಮುಂದಾಗಬೇಕು ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ವೈ. ಭರತ್ ಶೆಟ್ಟಿ ವಿಧಾನಸಭೆಯಲ್ಲಿ ಒತ್ತಾಯಿಸಿದ್ದಾರೆ.

ಶೇ. 50ಕ್ಕಿಂತ ಅಧಿಕ ಉದ್ಯೋಗಿಗಳು ಇದ್ದಲ್ಲಿ ಈ ನಿಯಮ ಜಾರಿಯಾಗಬೇಕಿದೆ. ಸಿ ಮತ್ತು ಡಿ ಗ್ರೂಪ್ ಗಳಲ್ಲಿ ಶೇ. 100, ಬಿ ಗ್ರೂಪ್ ಗೆ ಶೇ. 85, ಎ ಗ್ರೂಪ್ ಗೆ ಶೇ. 65, ಉದ್ಯೋಗವನ್ನು ನೀಡಬೇಕೆಂಬ ನಿಯಮವಿದೆ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ಸಭೆ ನಡೆದು ವರದಿ ಅನುಷ್ಠಾನಿಸಲು ಅವಕಾಶ ನೀಡಲಾಗಿದೆ. ಕೈಗಾರಿಕಾ ಉದ್ಯೋಗ ನೀತಿಯಲ್ಲಿ ಈ ಬಗ್ಗೆ 2019ರಲ್ಲಿ ತಿದ್ದುಪಡಿ ಮಾಡಲಾಗಿದೆ.

ಆದರೆ, ಇದನ್ನು ಕಟ್ಟುನಿಟ್ಟಾಗಿ ಜಾರಿ ಮಾಡಿ ಸ್ಥಳೀಯರಿಗೆ ಉದ್ಯೋಗ ಸಿಗುವಂತೆ ಸರಕಾರ ಮಾಡಬೇಕೆಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರನ್ನು ಒತ್ತಾಯಿಸಿದರು. ಇದಕ್ಕುತ್ತರಿಸಿದ ಕಾರ್ಮಿಕ ಸಚಿವ ಹೆಬ್ಬಾರ್, ಈ ಬಗ್ಗೆ ಗಮನ ಹರಿಸಲಾಗುವುದು ಎಂದು ಭರವಸೆ ನೀಡಿದರು.

Edited By : Manjunath H D
PublicNext

PublicNext

05/02/2021 12:34 pm

Cinque Terre

78.45 K

Cinque Terre

2

ಸಂಬಂಧಿತ ಸುದ್ದಿ