ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ಸರ್ಕಾರ ದಾರಿಯಲ್ಲಿ ನಿಂತಿರೋ ಡಕೋಟ ಎಕ್ಸ್ಪ್ರೆಸ್ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಚಾಟಿ ಬೀಸಿದ್ದಾರೆ.
ಕಲಾಪದಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಅಂದಿನ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ನಿಮ್ಮ ಸರ್ಕಾರ ಟೇಕಾಫ್ ಆಗಿಲ್ಲ ಅಂತ ಪದೇ ಪದೇ ಹೇಳುತ್ತಿದ್ದರು. ಈಗ ಅವರದೇ ಸರ್ಕಾರದ ಸ್ಥಿತಿ ಏನಾಗಿದೆ ಎಂದು ಪ್ರಶ್ನಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ''ಅಲ್ಲಿ ನೋಡಿದ್ರೆ ಇವತ್ತು ಏರ್ ಶೋ ನಡೆಯುತ್ತಿದೆ. ನೀವು ಡಕೋಟ ಅಂದ್ರೆ ಹೇಗೆ'' ಎಂದು ಸದನದಲ್ಲಿ ನಗೆ ಬಿತ್ತುತ್ತಾರೆ.
ಮತ್ತೆ ಮಾತು ಮುಂದುವರಿಸಿದ ಸಿದ್ದರಾಮಯ್ಯ ಅವರು, ಏರ್ ಶೋ ಮಾಡುತ್ತಿರುವುದು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಅಲ್ಲ ಬಿಡಿ. ನೀಡು ಜಸ್ಟ್ ನೋಡಲಿಕ್ಕೆ ಹೋಗಿದ್ರಿ ಅಷ್ಟೇ ಎಂದರು. ಅಷ್ಟೇ ಅಲ್ಲದೆ ತಮ್ಮ ಮಾತಿನಲ್ಲಿ ಪದೇ ಪದೇ ಡಕೋಟ ಬಸ್ ಎಂದು ಕುಟುಕಿದರು.
PublicNext
04/02/2021 01:42 pm