ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾರಿಗೆ ನೌಕರರಿಗೆ ಸಿಹಿ ಸುದ್ದಿ ಕೊಟ್ಟ ಸವದಿ

ಬೆಂಗಳೂರು: ತಮಗೆ ನೀಡಿದ್ದ ಭರವಸೆಗಳನ್ನು ಸರ್ಕಾರ ಈಡೇರಿಸದ ಹಿನ್ನೆಲೆಯಲ್ಲಿ ಸಾರಿಗೆ ನೌಕರರು ಮತ್ತೆ ಮುಷ್ಕರ ನಡೆಸಲಿದ್ದಾರೆ ಎನ್ನಲಾಗಿತ್ತು. ಫೆಬ್ರವರಿ ತಿಂಗಳು ಬಂದರೂ ಡಿಸೆಂಬರ್ ತಿಂಗಳ ವೇತನವನ್ನೇ ಪೂರ್ತಿಯಾಗಿ ನೀಡಿಲ್ಲ. ಕೇವಲ ಅರ್ಧ ವೇತನ ನೀಡಲಾಗಿದೆ ಎಂದು ಸಾರಿಗೆ ನೌಕರರು ಆರೋಪಿಸಿದ್ದರು. ಇದಕ್ಕೆ ಇಂದು ವಿಧಾನಸೌಧದಲ್ಲಿ ಸ್ಪಷ್ಟನೆ ನೀಡಿರುವ ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ, ಸಾರಿಗೆ ನೌಕರರ ಸಂಬಳ ಕಡಿತ ಮಾಡಿಲ್ಲ. ಡಿಸೆಂಬರ್ ತಿಂಗಳ ಅರ್ಧ ಸಂಬಳ ಕೊಟ್ಟಿದ್ದೇವೆ. ಉಳಿದ 15 ದಿನದ ಸಂಬಳವನ್ನು 2ರಿಂದ 3 ದಿನಗಳಲ್ಲಿ ನೀಡಲಿದ್ದೇವೆ ಎಂದು ಭರವಸೆ ನೀಡಿದ್ದಾರೆ.

ಸಾರಿಗೆ ನೌಕರರು ಸರ್ಕಾರದ ಮುಂದೆ 10 ಬೇಡಿಕೆ ಇಟ್ಟಿದ್ದರು. ಅವುಗಳಲ್ಲಿ 9 ಬೇಡಿಕೆಗಳನ್ನು ಈಡೇರಿಸಲು ಒಪ್ಪಿದ್ದೇವೆ. ಅದಕ್ಕಾಗಿ ಒಂದು ಸಮಿತಿ ರಚಿಸಿ, ಮೂರ್ನಾಲ್ಕು ಬಾರಿ ಸಭೆ ಮಾಡಿದ್ದೇವೆ. ತರಬೇತಿ ಸಮಯವನ್ನು ಎರಡು ವರ್ಷದಿಂದ ಒಂದು ವರ್ಷಕ್ಕೆ ಇಳಿಸುವ, ಬಾಟಾ ವ್ಯವಸ್ಥೆಯನ್ನು ಮತ್ತೆ ತರಲು ನಿರ್ಧಾರ ಮಾಡಲಾಗಿದೆ. ನೌಕರ ವರ್ಗಕ್ಕೆ ಸರ್ಕಾರದ ಮೇಲೆ ಹಾಗೂ ಸರ್ಕಾರಕ್ಕೆ ನೌಕರ ವರ್ಗದ ಮೇಲೆ ಭರವಸೆ ಇದೆ. ಎಲ್ಲರೂ ಒಂದು ಕುಟುಂಬದಂತೆ ಇದ್ದಾರೆ. ಇಂತಹ ಸಂದರ್ಭದಲ್ಲಿ ಮಧ್ಯದಲ್ಲಿ ಯಾರೋ ಬಂದು ಕಡ್ಡಿ ಅಲ್ಲಾಡಿಸೋದು ಬೇಡ ಎಂದಿದ್ದಾರೆ.

Edited By : Nagaraj Tulugeri
PublicNext

PublicNext

02/02/2021 04:47 pm

Cinque Terre

65.09 K

Cinque Terre

8

ಸಂಬಂಧಿತ ಸುದ್ದಿ