ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಹುಲ್ ಈಗ ಪ್ರಬುದ್ಧ ನಾಯಕ : ಮತ್ತೇ ಕಾಂಗ್ರೆಸ್ ಅಧ್ಯಕ್ಷ

ಹೊಸದಿಲ್ಲಿ : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಹಾಗೂ ಎನ್ ಡಿಎಗೆ ಟಕ್ಕರ್ ಕೊಡುವಲ್ಲಿ ಕಾಂಗ್ರೆಸ್ ಪಕ್ಷ ಕೊನೆಗೂ ಯಶಸ್ವಿಯಾಗಲಿದೆ ಎಂದು ಪಕ್ಷದ ನಾಯಕರು ಸಂಭ್ರಮಿಸುತ್ತಿದ್ದಾರೆ.

ಪಕ್ಷಕ್ಕೆ ಸಮರ್ಥ ನಾಯಕತ್ವ ಸಿಕ್ಕಿದೆ, ತಮ್ಮ ನಾಯಕ ನುಡಿಯುತ್ತಿರುವ ಭವಿಷ್ಯವಾಣಿ ನಿಜಕ್ಕೂ ಸತ್ಯವಾಗ ತೊಡಗಿವೆ. ಹೀಗಾಗಿ ನಮ್ಮ ವರಿಷ್ಠ ಯುವ ನಾಯಕರೇ ಪಕ್ಷವನ್ನು ಮುನ್ನಡೆಸಲಿದ್ದಾರೆ. ಅದಕ್ಕಾಗಿಯೇ ಎಲ್ಲ ರಾಜ್ಯಗಳ ಕಾಂಗ್ರೆಸ್ ಮುಖಂಡರು ಒಕ್ಕೊರಲಿನಿಂದ, ಅವರೆ ಪಕ್ಷದ ರಾಷ್ಟ್ರೀಯ ನಾಯಕರಾಗಬೇಕೆಂಬ ನಿರ್ಣಯ ಕೊಂಡಿದ್ದೇವೆ ಎಂದು ಹೇಳುತ್ತಿದ್ದಾರೆ.

ಜಿಎಸ್ ಟಿ ವೈಫಲ್ಯ ಹಾಗೂ ರೈತರ ಚಳುವಳಿ ಕುರಿತು ನಮ್ಮ ನಾಯಕ ನುಡಿದ ಮಾತುಗಳು ಸತ್ಯವಾಗಿವೆ. ಇವರನ್ನಲ್ಲದೆ ನಾವು ಯಾರನ್ನೂ ನಾಯಕರೆಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲವೆಂದು ಕಾಂಗ್ರೆಸ್ ಹಿರಿಯ ನಾಯಕರು ಹೇಳುತ್ತಿದ್ದಾರೆ.

ಹಾಗಾದರೆ ಕಾಂಗ್ರೆಸ್ ಸಾರಥ್ಯವನ್ನು ವಹಿಸಲಿರುವ ಆ ವರಿಷ್ಠ ಯುವ ನಾಯಕ ಯಾರು ಗೊತ್ತೆ?

ಆ ನಾಯಕ ಮತ್ತಾರೂ ಅಲ್ಲ, ಈಗ ಮತ್ತೇ ಬೇಸಿಗೆ ರಜೆ ಮೇಲೆ ವಿದೇಶ ಪ್ರವಾಸದಲ್ಲಿರುವ ರಾಹುಲ್ ಗಾಂಧಿ. ಆದರೆ ಕಾಂಗ್ರೆಸ್ಸಿಗರು ರಾಹುಲ್ ಅವರ ವಿದೇಶ ಪ್ರವಾಸ ಸುದ್ದಿಯನ್ನು ನಿರಾಕರಿಸಿದ್ದಾರೆ.

ರಾಹುಲ್ ಮಾತ್ರ ಕಾಂಗ್ರೆಸ್ಸ್ ಕಾರ್ಯಕರ್ತರಿಗೆ ಪ್ರೇರಣೆ ನೀಡಬಲ್ಲರು, ಇತ್ತೀಚಿನ ಅವರ ಪ್ರಬುದ್ಧ ನಡವಳಿಕೆಗಳು, ಮೋದಿ ಸರಕಾರದ ವೈಫಲ್ಯಗಳ ಮೇಲೆ ಬೆಳಕು ಚೆಲ್ಲುತ್ತಿರುವುದನ್ನು ನೋಡಿದರೆ ಅವರಿಗೆ ನಾಯಕತ್ವದ ಎಲ್ಲ ಸಾಮರ್ಥ್ಯವಿದೆ ಎಂಬುದು ಸಾಬೀತಾಗಿದೆ. ಹೀಗಾಗಿ ಅವರೆ ಪಕ್ಷದ ಅಧ್ಯಕ್ಷರಾಗಬೇಕೆಂದು ನಾವೆಲ್ಲ ಗೊತ್ತುವಳಿ ಸ್ವೀಕರಿಸಿದ್ದೇವೆ ಎಂದು ದೆಹಲಿ ಕಾಂಗ್ರೆಸ್ ಅಧ್ಯಕ್ಷ ಅನಿಲ ಚೌಧರಿ ಹೇಳಿದ್ದಾರೆ.

ದೆಹಲಿ ಮಾತ್ರವಲ್ಲ ಎಲ್ಲ ರಾಜ್ಯಗಳ ಕಾಂಗ್ರೆಸ್ ಅಧ್ಯಕ್ಷರೂ ಈ ಗೊತ್ತುವಳಿಯನ್ನು ಬೆಂಬಲಿಸಿದ್ದಾರೆ ಎಂದೂ ಹೇಳಿದ್ದಾರೆ.

Edited By :
PublicNext

PublicNext

02/02/2021 01:29 pm

Cinque Terre

64.58 K

Cinque Terre

8