ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೇಂದ್ರ ಬಜೆಟ್: ಇನ್ಮೇಲೆ ಯಾವುದು ತುಟ್ಟಿ? ಯಾವುದು ಅಗ್ಗ?

ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ (ಫೆ.1, 2021) ಮಂಡಿಸಿದ 2021-22ನೇ ಸಾಲಿನ ಆಯವ್ಯಯದಲ್ಲಿ ಕೋವಿಡ್ ಸೆಸ್ ವಿಧಿಸಿಲ್ಲ ಎಂಬುದು ಪ್ರಮುಖ ಅಂಶವಾಗಿದೆ.

ಕೋವಿಡ್ ನಿಂದಾಗಿ ಭಾರತ ತಾಂತ್ರಿಕ ಹಿಂಜರಿಕೆಯಲ್ಲಿದ್ದು, ಈ ನಿಟ್ಟಿನಲ್ಲಿ ಬಜೆಟ್ ನಲ್ಲಿ ಕೋವಿಡ್ ಸೆಸ್ ವಿಧಿಸುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಸರ್ಕಾರ ಕೋವಿಡ್ ಸೆಸ್ ವಿಧಿಸಿಲ್ಲ.

ಅಲ್ಲದೇ ಈ ಬಾರಿ ಬಜೆಟ್ ನಲ್ಲಿ ಯಾವ ವಸ್ತು ಬೆಲೆ ಏರಿಕೆಯಾಗಿದೆ, ಯಾವ ವಸ್ತು ಬೆಲೆ ಇಳಿಕೆಯಾಗಿದೆ ಎಂಬ ಮಾಹಿತಿ ಇಲ್ಲಿದೆ.

ಯಾವುದು ದುಬಾರಿ?:ಪೆಟ್ರೋಲ್, ಡೀಸೆಲ್, ರಸಗೊಬ್ಬರ, ಕಲ್ಲಿದ್ದಲು, ಹತ್ತಿ, ಮದ್ಯ, ಸೇಬು, ವಿದೇಶಿ ಅಡುಗೆ ಎಣ್ಣೆ, ವಾಹನದ ಬಿಡಿ ಭಾಗ, ವಿದೇಶದಿಂದ ಆಮದಾಗುವ ಮೊಬೈಲ್ ಬಟ್ಟೆ, ಎಲೆಕ್ಟ್ರಾನಿಕ್ಸ್ ವಸ್ತುಗಳು, ಚರ್ಮದ ಶೂ, ಮೊಬೈಲ್ ಚಾರ್ಜರ್ ಬೆಲೆ ಏರಿಕೆ.

ಯಾವುದು ಅಗ್ಗ?: ಚಿನ್ನ, ಬೆಳ್ಳಿ, ಕಬ್ಬಿಣ, ಸ್ಟೀಲ್, ನೈಲಾನ್, ಬಟ್ಟೆಗಳು, ತಾಮ್ರದ ಲೋಹಗಳು, ವಿದ್ಯುತ್

Edited By : Nagaraj Tulugeri
PublicNext

PublicNext

01/02/2021 02:58 pm

Cinque Terre

77.35 K

Cinque Terre

18

ಸಂಬಂಧಿತ ಸುದ್ದಿ