ಉಡುಪಿ: ಶಿವಾಜಿ ನಮ್ಮವನೇ ,ಎಂಟು ತಲೆಮಾರು ಪೂರ್ವದಲ್ಲಿ ಶಿವಾಜಿ ವಂಶಸ್ಥರು ಕರ್ನಾಟದಲ್ಲಿದ್ರು.ಗದಗ ಜಿಲ್ಲೆಯವರಾಗಿದ್ದು, ತದನಂತರ ಅವರು ಬೇರೆ ರಾಜ್ಯಕ್ಕೆ ಹೋಗಿದ್ದಾರೆ.ಮಹಾರಾಷ್ಟ್ರದ ಮುಖ್ಯಮಂತ್ರಿ ಅವಿವೇಕತನದ ಹೇಳಿಕೆ ನೀಡುತ್ತಿದ್ದಾರೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿಕೆ ನೀಡಿದ್ದಾರೆ.
ಉಡುಪಿಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ ಅವರು,ಮಹಾ ಸಿಎಂ ಪದೇಪದೇ ಉದ್ಧಟತನದ ಭಾಷೆ ಬಳಸುತ್ತಿದ್ದಾರೆ.ಬೆಳಗಾವಿ, ನಿಪ್ಪಾಣಿ , ಕಾರವಾರ ಕರ್ನಾಟಕದ ಅವಿಭಾಜ್ಯ ಅಂಗ.ನಮ್ಮ ರಾಜ್ಯದ 2ನೇ ರಾಜಧಾನಿ ಬೆಳಗಾವಿ ಅನ್ನೋದು ಹೆಮ್ಮೆ.ಮಹಾರಾಷ್ಟ್ರದಲ್ಲಿ ಮೂರು ಪಕ್ಷಗಳು ಸೇರಿ ಸರ್ಕಾರ ರಚನೆ ಮಾಡಿವೆ.ಕನ್ನಡ ಸೀರಿಯಲ್ "ಮನೆಯೊಂದು ಮೂರು ಬಾಗಿಲು ಥರ ಆಗಿದೆ"ಎತ್ತು ಏರಿಗೆಳೆದರೆ ಕೋಣ ಕೆರೆಗೆ ಎಳೆಯಿತು "ಎಂಬಂತಾಗಿದೆ ಅಲ್ಲಿಯ ಪರಿಸ್ಥಿತಿ.ಅಸ್ಥಿರತೆ ಉಂಟಾದಾಗ ಜನರ ಗಮನ ಬೇರೆಡೆ ಸೆಳೆಯಲು ಹೇಗೆಲ್ಲ ಮಾತನಾಡುತ್ತಾರೆ.ಮಹಾರಾಷ್ಟ್ರ ಜನರ ದೂರು, ಟೀಕೆ, ದ್ವೇಷ ದಿಂದ ಗಮನಸೆಳೆಯಲು ಪ್ರಯತ್ನ ಮಾಡುತ್ತಿದ್ದಾರೆ.ವಿವಾದಾತ್ಮಕ ಹೇಳಿಕೆಯನ್ನು ಕಠೋರವಾಗಿ ಖಂಡಿಸುತ್ತೇನೆ ಎಂದು ಹೇಳಿದರು.
PublicNext
31/01/2021 09:18 pm