ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಬುರ್ಗಿ : ಗಾಂಧಿ ಕೊಂದ ಗೋಡ್ಸೆ ಭಾರತದ ಮೊದಲ ಟೆರರಿಸ್ಟ್

ಕಲಬುರ್ಗಿ : ಮುಸ್ಲಿಂ ಸಮುದಾಯ ಪರ ಇದ್ದಾರೆಂದು ನಾಥೂರಾಮ್ ಗೋಡ್ಸೆ ಗಾಂಧಿಜಿಯನ್ನು ಕೊಲೆ ಮಾಡಿದ.ಹೀಗಾಗಿ ಆತ ಸ್ವತಂತ್ರ ಭಾರತದ ಮೊದಲ ಟೆರರಿಸ್ಟ್ ಎಂದು ಸಂಸದ ಅಸಾದುದ್ದೀನ್ ಒವೈಸಿ ಬಣ್ಣಿಸಿದ್ದಾರೆ.

ನಾಥೂರಾಮ್ ಗೋಡ್ಸೆ ಆರ್ಎಸ್ಎಸ್ ಅನುಯಾಯಿ ಎಂಬುದು ಸೂರ್ಯನ ಬೆಳಕಿನಷ್ಟೆ ಸತ್ಯ ಆದರೆ ಸಂಘಿಗಳು ತಮಗೂ ಗೋಡ್ಸೆಗೂ ಸಂಬಂಧವಿಲ್ಲವೆಂದು ಹೇಳುತ್ತಿದ್ದಾರೆ. ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿದರೆ ಗೊತ್ತಾಗುವುದಿಲ್ಲವೆ. ಸಂಘಿಗಳನ್ನು ಬಗಲ್ಲಿಟ್ಟುಕೊಂಡ ಪ್ರಧಾನಿ ಮೋದಿ ಗಾಂಧಿ ಸಮಾಧಿಗೆ ನಮಸ್ಕರಿಸುತ್ತಾರೆ. ಅತ್ತ ಗಾಂಧಿಯನ್ನು ಕೊಂದು ಇತ್ತ ಸಾರ್ವಕರರನ್ನು ಆರಾಧಿಸುತ್ತಾರೆ ಎಂದು ಲೇವಡಿ ಮಾಡಿದ್ದಾರೆ ಒವೈಸಿ.

ಜೆಡಿಎಸ್ ಅಧ್ಯಕ್ಷ ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್ ಸಖ್ಯ ಮಾಡಬೇಡಿ ಎಂದು ಬುದ್ದಿ ಮಾತು ಹೇಳಿದ್ದೆ ಕೇಳಲಿಲ್ಲ. ಅದರ ಫಲ ಅನುಭವಿಸಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ತನ್ನ ದಮ್ ಕಳೆದುಕೊಂಡಿದೆ. ಹೀಗಾಗಿ ಅದಕ್ಕೆ ಯಾರೂ ಹೆದರಬೇಕಿಲ್ಲ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ತಮ್ಮ AIMIM ಪಕ್ಷ ಬಿಜೆಪಿಗೆ ಟಕ್ಕರ್ ಕೊಡಲಿದೆ ಎಂದರು.

Edited By :
PublicNext

PublicNext

31/01/2021 08:49 am

Cinque Terre

115.2 K

Cinque Terre

62

ಸಂಬಂಧಿತ ಸುದ್ದಿ