ಧಾರವಾಡ: ನನಗೆ ಸಚಿವ ಸ್ಥಾನ ನೀಡುವ ಸಂಬಂಧ ಸುಪ್ರೀಂ ಕೋರ್ಟ್ ತಡೆ ನೀಡಿದ್ದು, ಅದನ್ನು ನಾನು ಸ್ವಾಗತಿಸುತ್ತೇನೆ. ಅದನ್ನೇ ದೊಡ್ಡದಾಗಿ ಬಿಂಬಿಸುವ ಅಗತ್ಯವಿಲ್ಲ ಎಂದು ಹಳ್ಳಿ ಹಕ್ಕಿ, ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದರು.
ಧಾರವಾಡದಲ್ಲಿ ಸುದ್ದಿಗಾರರಂದಿಗೆ ಮಾತನಾಡಿದ ಅವರು, ನಾನು ಹಠದಿಂದ ಮಂತ್ರಿ ಆಗಬೇಕು ಎಂದು ಜೆಡಿಎಸ್ ಬಿಟ್ಟು ಬಂದಿಲ್ಲ. 17 ಜನ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೆವು. ಇಲ್ಲಿ ಪಕ್ಷ ರಾಜಕಾರಣ ಸತ್ತು ಹೋಗಿದೆ. ದೇಶದಲ್ಲಿ ಕುಟುಂಬ ರಾಜಕಾರಣಕ್ಕೆ ಕೊನೆ ಹಾಡಿದ್ದೇ ನಾವು. ಅನಂತ್ ಕುಮಾರ್ ನಿಧನದ ನಂತರ ಅವರ ಕುಟುಂಬಕ್ಕೆ ಟಿಕೆಟ್ ಸಿಕ್ಕಿಲ್ಲ. ಇನ್ನು ಅಂಗಡಿ ಕುಟುಂಬಕ್ಕೆ ಟಿಕೆಟ್ ಕೊಡುವುದರ ಬಗ್ಗೆ ಕಾದು ನೋಡೋಣ ಎಂದರು.
ದೇವೇಗೌಡರ ಜೆಡಿಎಸ್ ಪಕ್ಷವನ್ನು ನಾವೆಲ್ಲ ಒದ್ದು ಬಂದವರು. ಯಾರನ್ನು ಒದ್ದು ಬಂದೆವೋ ಅವರ ಜೊತೆಗೆ ಈಗ ನಮ್ಮ ಮದುವೆ ಆಗುತ್ತಿದೆ. ಇದೊಂದು ರೀತಿ ಷೆಕ್ಸಪೀಯರ್‌ನ ಹ್ಯಾಂಬ್ಲೇಟ್ ನಾಟಕದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
PublicNext
30/01/2021 08:19 pm