ಚೆನ್ನೈ: ಮಧುರೈ ನಗರದ ಟಿ ಕಲ್ಲುಪಟ್ಟಿ ಪ್ರದೇಶದ ಬಳಿ ಒಂದೂವರೆ ಎಕರೆ ಜಾಗದಲ್ಲಿ ನಿರ್ಮಾಣವಾದ ತಮಿಳುನಾಡಿನ ಮುಖ್ಯಮಂತ್ರಿಗಳಾದ ಜಯಲಲಿತಾ, ಎಂ.ಜಿ.ರಾಮಚಂದ್ರನ್ ದೇವಾಲಯ ಉದ್ಘಾಟನೆ ಇಂದು ನಡೆಯಲಿದೆ.
ತಮಿಳುನಾಡು ವಿಧಾನಸಭೆ ಚುನಾವಣೆಗೆ ಕೆಲವು ತಿಂಗಳ ಬಾಕಿ ಉಳಿದಿದ್ದು, ಅಣ್ಣಾಡಿಎಂಕೆಯ ಪ್ರಮುಖ ನಾಯಕರ ದೇಗುಲ ಉದ್ಘಾಟನೆ ಮಹತ್ವ ಪಡೆದುಕೊಂಡಿದೆ. ಈ ದೇಗುಲವನ್ನು 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಉದಯ್ ಕುಮಾರ್, ''ನಮ್ಮ ಅಮ್ಮ (ಜಯಲಲಿತಾ) ಅವರನ್ನು ನಾವು ದೇವತೆ ಎಂದು ಕರೆಯುತ್ತೇವೆ. ಇಲ್ಲಿ ನಮ್ಮ ಅಮ್ಮನನ್ನು ಪೂಜಿಸಲು ಬರುವ ಜನರಿಗೆ ಸಾಕಷ್ಟು ಸ್ಥಳಾವಕಾಶ ಇದೆ'' ಎಂದು ತಿಳಿಸಿದ್ದಾರೆ.
PublicNext
30/01/2021 09:46 am