ನವದೆಹಲಿ: ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಬಡವರಿಗೆ ಕೇಂದ್ರ ಸರ್ಕಾರವು ದಾಖಲೆ ಪ್ರಮಾಣದಲ್ಲಿ ಆರ್ಥಿಕ ಪ್ಯಾಕೇಜ್ ಘೋಷಿಸಿದೆ ಎಂದು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಹೇಳಿದ್ದಾರೆ. ಶುಕ್ರವಾರ ಬಜೆಟ್ನ ಜಂಟಿ ಸಂಸತ್ ಅಧಿವೇಶನ ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿಗಳು, ಆರ್ಥಿಕತೆಯನ್ನು ನಿಭಾಯಿಸಲು ದಾಖಲೆಯ ವಿತ್ತೀಯ ಪ್ಯಾಕೇಜ್ ಘೋಷಣೆಯೊಂದಿಗೆ, ನನ್ನ ಸರ್ಕಾರವು ಯಾವುದೇ ಬಡವ ಹಸಿವಿನಿಂದ ಬಳಲುವುದಿಲ್ಲ ಎಂಬುದನ್ನು ಖಚಿತಪಡಿಸಿದೆ ಎಂದರು.
ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಮಹಿಳೆಯರು, ಬಡ ಹಿರಿಯ ನಾಗರಿಕರು ಮತ್ತು ರೈತರಿಗೆ ಉಚಿತ ಆಹಾರ ಧಾನ್ಯ ಮತ್ತು ನೇರ ನಗದು ಪಾವತಿಯನ್ನು ಸರ್ಕಾರ ಘೋಷಿಸಿತ್ತು ಎಂದು ಹೇಳಿದರು. ನೂತನ ಎಕ್ಸ್‌ಪ್ರೆಸ್ ಹೆದ್ದಾರಿಗಳು, ಜಲಮಾರ್ಗಗಳು, ರೈಲ್ವೆಯ ಸರಕು ರೈಲುಗಳು ಮತ್ತು ಮೆಟ್ರೋ ಸಂಪರ್ಕ ಸೇರಿದಂತೆ ಭಾರತದ ಮೂಲಸೌಕರ್ಯಗಳ ಅಭಿವೃದ್ಧಿ ಮತ್ತು ಪ್ರಗತಿಯ ಬಗ್ಗೆ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು.
PublicNext
29/01/2021 09:20 pm