ಬೆಂಗಳೂರು: ವಿಧಾನ ಸಭೆ ಆಯ್ತು ಈಗ ಮೇಲ್ಮನೆ ವಿಧಾನ ಪರಿಷತ್‌ನಲ್ಲೂ ಅಶ್ಲೀಲ ವಿಡಿಯೋ ವಿಡಿಯೋ ನೋಡಿದ ಅಮಾನವೀಯ, ಲಜ್ಜೆಗೆಟ್ಟ ಪ್ರಸಂಗ ಘಟನೆ ನಡೆದಿದೆ.
ಹೌದು. ವಿಧಾನ ಪರಿಷತ್ ಕಲಾಪದ ವೇಳೆ ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್ ಅವರು ನೀಲಿ ಚಿತ್ರ ವೀಕ್ಷಣೆ ಮಾಡಿರುವ ಆರೋಪ ಕೇಳಿಬಂದಿದೆ. ಪ್ರಕಾಶ್ ರಾಥೋಡ್ ಅವರು ಕಲಾಪದಲ್ಲಿ ನೀಲಿ ಚಿತ್ರ ವೀಕ್ಷಣೆ ಮಾಡಿದ್ದಾರೆಂದು ಕೆಲ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗುತ್ತಿದೆ. ಆದ್ರೆ ಈ ಆರೋಪವನ್ನು ಪ್ರಕಾಶ್ ರಾಥೋಡ್ ಅಲ್ಲಗಳೆದಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಪ್ರಕಾಶ್ ರಾಥೋಡ್, ''ನಾನು ಅಂತಹದ್ದೇನು ನೋಡಲಿಲ್ಲ. ಮೊಬೈಲ್‌ನಲ್ಲಿ ಕೆಲವು ಮೆಸೇಜ್‌ಗಳು ಹೆಚ್ಚಾಗಿದ್ದವು. ಅದನ್ನು ಡಿಲೀಟ್ ಮಾಡುತ್ತಿದ್ದೆ. ಅಶ್ಲೀಲ ವಿಡಿಯೋ ನೋಡುವ ಕೆಲಸವನ್ನು ನಾನು ಮಾಡುವುದಿಲ್ಲ. ದಯಮಾಡಿ ತಪ್ಪು ಮಾಹಿತಿ ಕೊಡಬಾರದು'' ಎಂದು ಮನವಿ ಮಾಡಿಕೊಂಡಿದ್ದಾರೆ.
PublicNext
29/01/2021 04:11 pm