ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ಇನ್ಮುಂದೆ ಸಹನೆಯಿಲ್ಲ, ಉಗ್ರ ಹೋರಾಟ, ಅನಾಹುತವಾದ್ರೆ ಸಿಎಂ ನೇರ ಹೊಣೆ: ಯಡಿಯೂರಪ್ಪರಿಗೆ ಸವಾಲು ಹಾಕಿದ ಶ್ರೀಗಳು ಹೇಳಿದ್ದೇನು...?

ದಾವಣಗೆರೆ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಒತ್ತಾಯಿಸಿ ಪಾದಯಾತ್ರೆ ನಡೆಸುತ್ತಿರುವ ಕೂಡಲಸಂಗಮ ಪೀಠದ ಪೀಠಾಧಿಪತಿ ಬಸವ ಮೃತ್ಯುಂಜಯ ಸ್ವಾಮೀಜಿ ರಾಜ್ಯ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದು, ನಮ್ಮ ಹೋರಾಟ ಇಷ್ಟು ದಿನ ಶಾಂತಿ, ಸಹನೆಯಿಂದ ಕೂಡಿತ್ತು. ನಾಳೆಯಿಂದ ಉಗ್ರ ಸ್ವರೂಪ ಪಡೆಯಲಿದೆ ಎಂದು ಘೋಷಿಸಿದ್ದಾರೆ.

ಹರಿಹರದಲ್ಲಿ ಮಾತನಾಡಿದ ಶ್ರೀಗಳು, ಪಂಚಮಸಾಲಿ ಸಮಾಜ ಶಾಂತಿಪ್ರಿಯ. ಇದಕ್ಕೆ ಹೆಸರುವಾಸಿ. ನಾವು ಕ್ರಾಂತಿಮಾರ್ಗ ಹಿಡಿಯುವ ಮುನ್ನ ಸಿಎಂ ಯಡಿಯೂರಪ್ಪ ಗಟ್ಟಿ ನಿರ್ಧಾರ ಮಾಡಬೇಕು‌. ಇನ್ಮುಂದೆ ನಮ್ಮದು ಮನವಿ ಅಲ್, ಆಗ್ರಹ. ಹದಿನೈದು ದಿನ ತಾಳ್ಮೆಯಿಂದ ಕಾದರೂ ಪ್ರಯೋಜನ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು‌.

ಫೆಬ್ರವರಿ 15ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದೇವೆ. ಪಂಚಮಸಾಲಿ ಪಂಚಲಕ್ಷ ಯಾತ್ರೆಯ ಹೆಸರಿನಡಿ ಈ ಕಾರ್ಯ ನಡೆಯಲಿದೆ. ಹತ್ತು ಲಕ್ಷ ಮಂದಿ ಸೇರಲಿದ್ದು, ಮುತ್ತಿಗೆ ಹಾಕುವ ವೇಳೆ ಏನಾದರೂ ಅನಾಹುತ, ಅಹಿತರ ಘಟನೆಗಳು ನಡೆದರೆ ಸಿಎಂ ಯಡಿಯೂರಪ್ಪರೇ ನೇರ ಹೊಣೆ‌. ಈಗಾಗಲೇ ಮೀಸಲಾತಿ ಹೋರಾಟಕ್ಕೆ ಒಂದು ಬಲಿ ಆಗಿದೆ. ಮೊರಗೇರಿಯ ಈಶಪ್ಪ ಪಾದಯಾತ್ರೆ ವೇಳೆ ಮೃತಪಟ್ಟಿದ್ದು, ಹೋರಾಟದ ಮೊದಲ ಹುತಾತ್ಮ. ಮೀಸಲಾತಿ ಸಿಗುವವರೆಗೆ ಹೋರಾಟ ಮೊಟಕುಗೊಳ್ಳದು ಎಂದು ಸ್ಪಷ್ಟಪಡಿಸಿದ್ದಾರೆ.

Edited By : Nagesh Gaonkar
PublicNext

PublicNext

29/01/2021 03:59 pm

Cinque Terre

71.35 K

Cinque Terre

10

ಸಂಬಂಧಿತ ಸುದ್ದಿ